ಮನರಂಜನೆ

ಡಿಸೆಂಬರ್ 10ಕ್ಕೆ ಹಸೆಮಣೆ ಏರಲಿರುವ ಮಿಸ್ಟರ್ &ಮಿಸೆಸ್ ರಾಮಚಾರಿ

ಕೆಲವೇ ಕೆಲವು ಸ್ನೇಹಿತರು ಮತ್ತು ಸಂಬಂಧಿಕರು ಹಾಗೂ ಪೋಷಕರ ಸಮಕ್ಷಮದಲ್ಲಿ ಗೋವಾದಲ್ಲಿ ಸರಳವಾಗಿ ನಿಶ್ಚಿತಾರ್ಥ ಕಾರ್ಯವನ್ನು ಮುಗಿಸಿ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದ ಕನ್ನಡದ ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್  ಹಸೆಮಣೆ ಏರಲು ಕಾಲ ಕೂಡಿ ಬಂದಿದೆ.

ಇದೇ  ಡಿ.10 ಮತ್ತು 11 ರಂದು ಬೆಂಗಳೂರಿನಲ್ಲಿ ಅದ್ಧೂರಿಯಾಗಿ ಮದುವೆ ನಡೆಯಲಿದೆ.  ನೆರೆ ರಾಜ್ಯ ಗೋವಾದಲ್ಲಿ ನಿಶ್ಚಿತಾರ್ಥ ನೆರವೇರಿಸಿಕೊಂಡಿದ್ದ ಈ ಜೋಡಿ ಚಿತ್ರರಂಗದ ಗಣ್ಯರು ಸೇರಿದಂತೆ ಹಲವಾರು ಹಿತೈಷಿಗಳ ಕೆಂಗಣ್ಣಿಗೆ ಗುರಿಯಾಗಿತ್ತು. ಇದೀಗ ಬೆಂಗಳೂರಿನಲ್ಲಿ ಹಸೆಮಣೆ ಏರುವ ಮೂಲಕ ಅಭಿಮಾನಿಗಳನ್ನು ಸಂತುಷ್ಟಗೊಳಿಸಲಿದೆಯಂತೆ ಈ ಜೋಡಿ.

Leave a Reply

comments

Related Articles

error: