ಕ್ರೀಡೆದೇಶ

ಮಕ್ಕಳ ನಕಲಿ ಟ್ವೀಟರ್ ಖಾತೆ ತಿಳಿದು ಕೋಪಗೊಂಡ ಸಚಿನ್ ತೆಂಡುಲ್ಕರ್

ದೇಶ(ನವದೆಹಲಿ)ಅ.18:- ಕ್ರಿಕೆಟ್ ದಂತಕಥೆ ಸಚಿನ್ ತೆಂಡುಲ್ಕರ್ ತನ್ನ ಮಕ್ಕಳಿಗೆ ಸದಾ ರಕ್ಷಕರಾಗಿಯೇ ಇರುತ್ತಾರಂತೆ!

ಅವರ ಮಕ್ಕಳ  ನಕಲಿ ಟ್ವೀಟರ್ ಖಾತೆ ಕಂಡು ಬಂದಿದ್ದು, ಈ ಕುರಿತು ತಿಳಿಯುತ್ತಲೇ ಕೋಪಗೊಂಡರಂತೆ. ನನ್ನ ಮಕ್ಕಳಾದ ಅರ್ಜುನ್  ತೆಂಡುಲ್ಕರ್ ಮತ್ತು ಸಾರಾ ತೆಂಡುಲ್ಕರ್  ಟ್ವೀಟರ್ ಖಾತೆಯನ್ನು ಹೊಂದಿಲ್ಲ ಎಂದು ಸ್ಪಷ್ಟಪಡಿಸಿದ್ದಾರಂತೆ. ಸ್ಟಾರ್ ಮಕ್ಕಳಾದರೂ ಕೂಡ ಅವರು ಇವೆಲ್ಲದರಿಂದ ದೂರವೇ ಉಳಿದಿದ್ದಾರೆ.  ತೆಂಡುಲ್ಕರ್ ಮಗಳು ಬಾಲಿವುಡ್ ನಲ್ಲಿ ಪ್ರವೇಶ ಪಡೆಯಲಿದ್ದಾರೆ ಎಂಬ ವದಂತಿಗಳು ಕೇಳಿ ಬರುತ್ತಿವೆ. ಆದರೆ ಸಚಿನ್ ಈ ವದಂತಿಯನ್ನು ತಳ್ಳಿ ಹಾಕಿದ್ದಾರೆ. ಹಲವು ಪಾರ್ಟಿಗಳಲ್ಲಿ ಮತ್ತು ಫಂಕ್ಷನ್ ಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಸಾರಾ ತೆಂಡುಲ್ಕರ್ ಪ್ರಸಿದ್ಧ ವ್ಯಕ್ತಿಯ ಮಗಳಾಗಿದ್ದು, ಸಾರಾಳನ್ನು ನಟಿ ಶ್ರೀದೇವಿ ಮಗಳು ಜಾಹ್ನವಿ ಮತ್ತು ಅಲಿಯಾಭಟ್ ಜೊತೆ ಹೋಲಿಕೆ ಮಾಡಲಾಗುತ್ತಿದೆಯಂತೆ. ಸಾರಾ 20ರ ಹರೆಯದವಳಾಗಿದ್ದು, ಚಿತ್ತಾಕರ್ಷಕ ನೋಟದಿಂದ ಗಮನ ಸೆಳೆಯುತ್ತಲೇ ಇರುತ್ತಾಳಂತೆ. (ಎಸ್.ಎಚ್)

Leave a Reply

comments

Related Articles

error: