ಕರ್ನಾಟಕಪ್ರಮುಖ ಸುದ್ದಿ

ಚಿತ್ರೀಕರಣದ ವೇಳೆ ಸಾಹಸ ಕಲಾವಿದರ ದುರಂತ ಸಾವು; ನಿರ್ಮಾಪಕ, ನಿರ್ದೇಶಕರ ವಿರುದ್ಧ ಕ್ರಿಮಿನಲ್ ದಾವೆ ದಾಖಲು

ಜಗ್ಗೇಶ್ ಅಳಲು... ಸಾಹಸ ನಟರ ಸಾವಿಗೆ ನಟ ಜಗ್ಗೇಶ್ ಅವರು ಮರುಗಿದ್ದು, ಭಾವಾವೇಶಭರಿತ ಟ್ವೀಟ್ ಮಾಡಿದ್ದಾರೆ. ದುರಂತಕ್ಕೆ ಅವರು ಸಾಹಸ ನಿರ್ದೇಶಕರತ್ತು ಬೆರಳು ತೋರಿದ್ದಾರೆ.
ಜಗ್ಗೇಶ್ ಅಳಲು…
ಸಾಹಸ ನಟರ ಸಾವಿಗೆ ನಟ ಜಗ್ಗೇಶ್ ಅವರು ಮರುಗಿದ್ದು, ಭಾವಾವೇಶಭರಿತ ಟ್ವೀಟ್ ಮಾಡಿದ್ದಾರೆ. ದುರಂತಕ್ಕೆ ಅವರು ಸಾಹಸ ನಿರ್ದೇಶಕರತ್ತ ಬೆರಳು ತೋರಿದ್ದಾರೆ.

‘ಮಾಸ್ತಿಗುಡಿ’ ಚಿತ್ರದ ಚಿತ್ರೀಕರಣದ ವೇಳೆ ಹೆಲಿಕಾಪ್ಟರ್‍ ನಿಂದ ನೀರಿಗೆ ಧುಮುಕಿದ ಖಳನಟರಾದ ಉದಯ್ ಹಾಗೂ ಅನಿಲ್ ಅವರುಗಳು ನೀರಿನಲ್ಲಿ ಮುಳುಗಿಹೋದ ಘಟನೆ ಇಂದು (ನ. 7, ಸೋಮವಾರ) ನಡೆದಿದೆ. ನೀರಿನಲ್ಲಿ ಮುಳುಗಿದ ಇವರಿಬ್ಬರ ದೇಹಗಳು ಇನ್ನೂ ಪತ್ತೆಯಾಗಿಲ್ಲ.

ಚಿತ್ರೀಕರಣಕ್ಕಾಗಿ ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ತಿಪ್ಪಗೊಂಡನಹಳ್ಳಿ ಜಲಾಶಯದ ಬಳಿಗೆ ತೆರಳಿದ್ದ ಚಿತ್ರತಂಡವು ಸಾಕಷ್ಟು ಮುಂಜಾಗ್ರತೆ ವಹಿಸದೇ ಇದ್ದ ಪರಿಣಾಮವೇ ಈ ದುರಂತ ಸಂಭವಿಸಿದೆ ಎನ್ನಲಾಗುತ್ತಿದೆ.

ಇವರ ಜೊತೆ ನೀರಿಗೆ ಧುಮುಕಿದ ನಟ ದುನಿಯಾ ವಿಜಯ್ ಅಪಾಯದಿಂದ ಪಾರಾಗಿದ್ದಾರೆ. ಆದರೆ ಅನಿಲ್ ಮತ್ತು ಉದಯ್ ಅವರುಗಳಿಗೆ ಈಜಲು ಬರುತ್ತಿರಲಿಲ್ಲ ಎನ್ನಲಾಗಿದೆ.

ಘಟನೆ ನಡೆದಿದ್ದು ಹೇಗೆ…?

ಹೆಲಿಕಾಪ್ಟರ್ ನಿಂದ 100 ಅಡಿ ಕೆಳಗೆ ಬೀಳುವ ದೃಶ್ಯದಲ್ಲಿ ದುನಿಯಾ ವಿಜಯ್, ಖಳನಟರಾದ ಅನಿಲ್ ಮತ್ತು ಉದಯ್ ಅವರು ಕೆರೆಗೆ ಹಾರಿದ್ದಾರೆ. ದುನಿಯಾ ವಿಜಯ್ ಈಜಿಕೊಂಡು ಬಂದು ಬೋಟ್ ಏರಿದ್ದಾರೆ. ಆದರೆ ಉದಯ್ ಮತ್ತು ಅನಿಲ್ ಅವರು ನೀರಿನಲ್ಲಿ ಮುಳುಗಿದ್ದಾರೆ.

ಸಂದರ್ಭಕ್ಕೆ ಸರಿಯಾಗಿ ಡೀಸೆಲ್ ಬೋಟ್‍ನ ಮೋಟರ್‍ ಕೆಟ್ಟು ತಕ್ಷಣ ಸ್ಟಾರ್ಟ್‍ ಆಗದೇಹೋದ ಕಾರಣ ಮುಳುಗುತ್ತಿದ್ದವರನ್ನು ರಕ್ಷಣೆ ಮಾಡಲು ಸಾಧ್ಯವಾಗಿಲ್ಲ ಎಂದು ಮೂಲಗಳು ತಿಳಿಸಿವೆ.

ಇವರಿಬ್ಬರೂ ಇತ್ತೀಚಿನ, ದೊಡ್ಮನೆ ಹುಡುಗ, ಮಾಸ್ತರ್ ಪೀಸ್, ಭಜರಂಗಿ, ಬಹದ್ದೂರ್ ಚಿತ್ರಗಳಲ್ಲಿ ಖಳನಟರಾಗಿ ನಟಿಸಿದ್ದರು. ಜಯಮ್ಮನ ಮಗ ಚಿತ್ರದಿಂದ ಉದಯ್ ಜನಪ್ರಿಯರಾಗಿದ್ದರು.

ಇಲ್ಲಿ ಚಿತ್ರೀಕರಣಕ್ಕೆ ನಿಷೇಧವಿದೆ…

ಅಪಾಯಕಾರಿ ಸ್ಥಳವಾದ ಇಲ್ಲಿ ಚಿತ್ರೀಕರಣಕ್ಕೆ ನಿಷೇಧವಿದ್ದರೂ ನಿಯಮ ಉಲ್ಲಂಘಿಸಿ ಚಿತ್ರತಂಡ ಚಿತ್ರೀಕರಣ ನಡೆಸಿದೆ ಎಂಬ ವಿಷಯ ಗೊತ್ತಾಗಿದೆ. ಜೊತೆಗೆ ಹಿನ್ನೀರಿನಲ್ಲಿ ಹೂಳು ತುಂಬಿಕೊಂಡಿರುವುದರಿಂದ ಮೀನುಗಾರರು ಬಲೆ ಹಾಕಿರುವ ಸಾಧ್ಯತೆಳಿವೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.

ಪೊಲೀಸರಿಂದ ಸ್ವಯಂಪ್ರೇರಿತ ದೂರು ದಾಖಲು…

ಮಾಸ್ತಿಗುಡಿ ಚಿತ್ರದ ನಿರ್ದೇಶಕ ಮತ್ತು ನಿರ್ಮಾಪಕರ ವಿರುದ್ಧ ಸ್ವಯಂಪ್ರೇರಿತರಾಗಿ ಕ್ರಿಮಿನಲ್ ದಾವೆ ದಾಖಲಿಸಿ ತನಿಖೆ ನಡೆಸುವಂತೆ ತಾವರೆಕೆರೆ ಇನ್ಸ್‍ಪೆಕ್ಟರ್‍ ಗೆ ಸೂಚಿಸಿರುವುದಾಗಿ ರಾಮನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.

ಕತ್ತಲಾದ್ದರಿಂದ ಕಾರ್ಯಾಚರಣೆ ಮೊಟಕು…?

ಸ್ಥಳಕ್ಕೆ ಆಗಮಿಸಿರುವ ಪರಿಹಾರ ಕಾರ್ಯಾಚರಣೆಯ ತಂಡವು ಆಗಮಿಸುವಷ್ಟರಲ್ಲಿ ಸಂಜೆಯ ಕತ್ತಲು ಆವರಿಸಿದ್ದರಿಂದ ಮೃತದೇಹ ಪತ್ತೆ ಕಾರ್ಯಾಚರಣೆಗೆ ಹಿನ್ನಡೆಯಾಗಿದೆ. ಪತ್ತೆ ಕಾರ್ಯಾಚರಣೆಯನ್ನು ನಾಳೆಗೆ ಮುಂದೂಡಬಹುದು ಎಂದು ಹೇಳಲಾಗುತ್ತಿದೆ.\

stunt-artist-psd
ಉದಯ್ ಮತ್ತು ಅನಿಲ್ ಅವರುಗಳ ಕೆಲವು ಚಿತ್ರಗಳು.

 

Leave a Reply

comments

Related Articles

error: