ಮನರಂಜನೆ

ಅ.22ಕ್ಕೆ ಚಿರಂಜೀವಿ ಸರ್ಜಾ-ಮೇಘನಾ ರಾಜ್ ನಿಶ್ಚಿತಾರ್ಥ

ಬೆಂಗಳೂರು,ಅ.18-ಸ್ಯಾಂಡಲ್ ವುಡ್ ನ ತಾರಾಜೋಡಿ ಚಿರಂಜೀವಿ ಸರ್ಜಾ ಮತ್ತು ಮೇಘನಾ ರಾಜ್ ಮದುವೆಯಾಗುತ್ತಿದ್ದಾರೆ ಎಂದು ಕೆಲ ತಿಂಗಳಿಂದ ಸುದ್ದಿಯಾಗಿತ್ತು. ಈ ಬಗ್ಗೆ ಎರಡು ಕುಟುಂಬದವರು ಯಾವುದೇ ಸ್ಪಷ್ಟನೆ ನೀಡಿರಲಿಲ್ಲ. ಆದರೆ ಈಗ ಚಿರಂಜೀವಿ ಸರ್ಜಾ ಮೇಘನಾ ಅವರನ್ನು ಮದುವೆಯಾಗುತ್ತಿರುವುದಾಗಿ ಹೇಳಿದ್ದಾರೆ.

ತಮ್ಮ ಹುಟ್ಟುಹಬ್ಬದ ದಿನದಂದು ಚಿರು ತಾವು ಮೇಘನಾ ರಾಜ್ ಅವರನ್ನು ಮದುವೆಯಾಗುತ್ತಿರುವುದಾಗಿ ಹೇಳಿದ್ದಾರೆ. ಅ.22 ರಂದು ಮೇಘನಾ ರಾಜ್ ಮತ್ತು ಚಿರಂಜೀವಿ ಸರ್ಜಾ ಅವರ ನಿಶ್ಚಿತಾರ್ಥ ನಡೆಯಲಿದ್ದು, ಕುಟುಂಬಸ್ಥರು ಹಾಗೂ ಕೆಲ ಸ್ನೇಹಿತರು ಭಾಗಿಯಾಗಲಿದ್ದಾರೆ. ಮದುವೆ ಯಾವಾಗ ಎಂಬುದರ ಬಗ್ಗೆ ಇನ್ನು ಅಧಿಕೃತ ಮಾಹಿತಿ ಸಿಕ್ಕಿಲ್ಲ. ಆದರೆ ಮೂಲಗಳ ಪ್ರಕಾರ ಡಿಸೆಂಬರ್ 6 ರಂದು ಬೆಂಗಳೂರಿನಲ್ಲಿ ಮದುವೆ ನಡೆಯಲಿದೆ.

ತಮ್ಮ ಭಾವಿ ಪತಿ ಚಿರಂಜೀವಿ ಸರ್ಜಾ ಅವರ ಹುಟ್ಟುಹಬ್ಬಕ್ಕೆ ನಟಿ ಮೇಘನಾ ರಾಜ್ ಟ್ವಿಟರ್ ಮೂಲಕ ಹ್ಯಾಪಿ ಬರ್ತ್ ಡೇ ಪ್ರಿನ್ಸ್ ಚಾರ್ಮಿಂಗ್ ಎಂದು ವಿಶ್ ಮಾಡಿದ್ದು, ಚಿರು ಥ್ಯಾಂಕು ಮೈ ಪ್ರಿನ್ಸೆಸ್ ಎಂದು ರೀ ಟ್ವಿಟ್ ಮಾಡಿದ್ದಾರೆ. ಚಿರು ಸರ್ಜಾ ಹುಟ್ಟುಹಬ್ಬದ ವಿಶೇಷವಾಗಿ `ಸಂಹಾರ’ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಗುರುದೇಶ ಪಾಂಡೆ ಈ ಚಿತ್ರವನ್ನ ನಿರ್ದೇಶನ ಮಾಡುತ್ತಿದ್ದಾರೆ. ಹರಿಪ್ರಿಯಾ ಮತ್ತು ಕಾವ್ಯ ಶೆಟ್ಟಿ ನಾಯಕಿಯಾಗಿ ಅಭಿನಯಿಸಿದ್ದಾರೆ. (ವರದಿ-ಎಂ.ಎನ್)
 

Leave a Reply

comments

Related Articles

error: