
ಮೈಸೂರು
ಪಡುವಾರಹಳ್ಳಿ ಬಳಿ ರಸ್ತೆ ಕಾಮಗಾರಿ ಹಿನ್ನೆಲೆಯಲ್ಲಿ ಸಂಚಾರ ಮಾರ್ಗ ನಿರ್ಬಂಧ, ಬದಲಿ ಮಾರ್ಗ ವ್ಯವಸ್ಥೆ
ಮೈಸೂರು (ಅ.19): ಮೈಸೂರು ನಗರದ ಹುಣಸೂರು ರಸ್ತೆಯಲ್ಲಿ ಪಡುವಾರಹಳ್ಳಿ ಬಳಿ ಮಳೆ ನೀರು ಹೋಗಲು ರಸ್ತೆ ಕತ್ತರಿಸಿ ಸೇತುವೆ ನಿರ್ಮಾಣ ಕಾಮಗಾರಿ ನಡೆಸುವ ಸಂಬಂಧ ಸಂಚಾರ ಮಾರ್ಗ ಸುವ್ಯವಸ್ಥೆಗಾಗಿ ಈ ಕೆಳಕಂಡಂತೆ ವಾಹನ ಸಂಚಾರವನ್ನು ನಿರ್ಬಂಧಿಸಿ ಬದಲಿ ಮಾರ್ಗ ವ್ಯವಸ್ಥೆ ಮಾಡಲಾಗಿದೆ.
ವಾಹನ ಸಂಚಾರ ನಿರ್ಬಂಧ :
ಮೈಸೂರು-ಹುಣಸೂರು ರಸ್ತೆಯಲ್ಲಿ ವಾಲ್ಮೀಕಿ ರಸ್ತೆ ಜಂಕ್ಷನ್ ನಿಂದ ಪಶ್ಚಿಮಕ್ಕೆ ಪಡುವಾರಹಳ್ಳಿ ವೃತ್ತದ ಜಂಕ್ಷನ್ವರೆಗೆ ಸಂಚರಿಸುತ್ತಿದ್ದ ಎಲ್ಲಾ ಮಾದರಿಯ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ.
ಬದಲಿ ಮಾರ್ಗ :
ಮೈಸೂರು-ಹುಣಸೂರು ರಸ್ತೆಯಲ್ಲಿ ವಾಲ್ಮೀಕಿ ರಸ್ತೆ ಜಂಕ್ಷನ್ ನಿಂದ ಪಶ್ಚಿಮಕ್ಕೆ ಸಾಗುತ್ತಿದ್ದ ಎಲ್ಲಾ ಮಾದರಿಯ ವಾಹನಗಳು ವಾಲ್ಮೀಕಿ ರಸ್ತೆ ಜಂಕ್ಷನ್ನಿಂದ ವಾಲ್ಮೀಕಿ ರಸ್ತೆ ಮೂಲಕ –ಅದಿಪಂಪಾ ರಸ್ತೆ ಜಂಕ್ಷನ್ –ಎಡ ತಿರುವು -ಅದಿಪಂಪಾ ರಸ್ತೆ – ಮಾತೃ ಮಂಡಲಿ ವೃತ್ತ- ಎಡ ತಿರುವು- ಟೆಂಪಲ್ ರಸ್ತೆ ಮೂಲಕ ಹುಣಸೂರು ರಸ್ತೆ ತಲುಪಿ ಮುಂದೆ ಸಾಗಬೇಕು. ಮೈಸೂರು-ಹುಣಸೂರು ರಸ್ತೆಯಲ್ಲಿ ಪಡುವಾರಹಳ್ಳಿ ವೃತ್ತದ ಜಂಕ್ಷನ್ ನಿಂದ ಪೂರ್ವಕ್ಕೆ ಸಾಗುತ್ತಿದ್ದ ಎಲ್ಲಾ ಮಾದರಿಯ ವಾಹನಗಳು ಪಡುವಾರಹಳ್ಳಿ ವೃತ್ತದ ಜಂಕ್ಷನ್ನಿಂದ ಬಯಲುರಂಗ ರಸ್ತೆ ಮೂಲಕ –ಬೊಗಧಿ ರಸ್ತೆ ಜಂಕ್ಷನ್-ಎಡ ತಿರುವು- ಬೊಗಧಿ ರಸ್ತೆ ಮೂಲಕ ಮುಂದೆ ಸಾಗಬೇಕು.
ಈ ಸಂಚಾರ ಮಾರ್ಗ ನಿರ್ಬಂಧ ಮತ್ತು ಬದಲಿ ಮಾರ್ಗವು ಅ.18 ರಿಂದ ನವೆಂಬರ್ 10 ರ ವರೆಗೆ ಚಾಲ್ತಿಯಲ್ಲಿರುತ್ತದೆ ಎಂದು ಮೈಸೂರು ನಗರ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.
(ಎನ್ಬಿಎನ್)