ಮೈಸೂರು

ದೀಪಾವಳಿ ಪ್ರಯುಕ್ತ ಸಿಹಿ ವಿತರಿಸಿದ ಮೇಯರ್

ಮೈಸೂರು,ಅ.19:- ಪಟಾಕಿ ತ್ಯಜಿಸಿ, ದೀಪ ಬೆಳಗಿ ಎನ್ನುವ ಉದ್ದೇಶದೊಂದಿಗೆ ಈ ಬಾರಿ ದೀಪಾವಳಿ ಆಚರಿಸಲಾಗುತ್ತಿದ್ದು, ಮೈಸೂರು ಮೇಯರ್ ಎಂ.ಜೆ.ರವಿಕುಮಾರ್ ಅಖಿಲ ಭಾರತೀಯ ರಾಜೇಂದ್ರ ಜೈನ್ ಮಹಿಳಾ ಪರಿಷದ್ ಜೊತೆ ಸೇರಿ ಸಿಹಿ ವಿತರಿಸಿದರು.

ನಗರದ ಕೆ.ಆರ್.ಆಸ್ಪತ್ರೆಯ ಮುಂಭಾಗ ಸಿಹಿ ವಿತರಿಸಿದ ಮೇಯರ್ ಎಂ.ಜೆ.ರವಿಕುಮಾರ್ ದೀಪಾವಳಿ ದೀಪಗಳ ಹಬ್ಬವಾಗಿದ್ದು ದೀಪ ಬೆಳಗಬೇಕು. ಪಟಾಕಿಯನ್ನು ಹೊಡೆಯುವುದರಿಂದ  ಪರಿಸರ ಮಾಲಿನ್ಯದ ಜೊತೆ ಕೆಲವು ಪಟಾಕಿಗಳು ಶಬ್ದ ಮಾಲಿನ್ಯವನ್ನೂ ಉಂಟು ಮಾಡುತ್ತವೆ. ಅದರಿಂದ ಪಟಾಕಿ ಬಳಸದೇ ದೀಪಬೆಳಗಿ ದೀಪಾವಳಿಯನ್ನು ಆಚರಿಸಿ ಎಂದು ತಿಳಿಸಿ ಸಿಹಿ ವಿತರಿಸಿದರು. ಎಲ್ಲರಿಗೂ ದೀಪಾವಳಿಯ ಶುಭಾಶಯಗಳನ್ನು ತಿಳಿಸಿದರು. ಇದೇ ವೇಳೆ ಅಖಿಲ ಭಾರತೀಯ ರಾಜೇಂದ್ರ ಜೈನ್ ಮಹಿಳಾ ಪರಿಷದ್ ಸದಸ್ಯೆಯರು ಮೇಯರ್ ಜೊತೆ ಕೈ ಜೋಡಿಸಿದರು. (ಕೆ.ಎಸ್,ಎಸ್.ಎಚ್)

 

Leave a Reply

comments

Related Articles

error: