ಮನರಂಜನೆ

ಕೋಪಗೊಂಡು ಸ್ಮೃತಿ ಇರಾನಿಗೆ ಟ್ವಿಟ್ ಮಾಡಿದ ದೀಪಿಕಾ ಪಡುಕೋಣೆ

ಸೂರತ್,ಅ.19-ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಬಾಲಿವುಡ್ ನ ಬಹುನಿರೀಕ್ಷಿತ ಚಿತ್ರ `ಪದ್ಮಾವತಿ’ ಚಿತ್ರ ಪ್ರಾರಂಭದಿಂದಲೂ ಸಾಕಷ್ಟು ಸದ್ದು ಮಾಡುತ್ತಿವೆ. ಈಗ ಮತ್ತೊಂದು ವಿಚಾರಕ್ಕೆ ಪದ್ಮಾವತಿ ಚಿತ್ರ ಸದ್ದು ಮಾಡುತ್ತಿದೆ.

ಗುಜರಾತ್ ನ ಸೂರತ್ ಶಾಪಿಂಗ್ ಮಾಲ್ ಒಂದರಲ್ಲಿ ಕಲಾವಿದ ಕರಣ್ ಬರೋಬ್ಬರಿ 48 ಗಂಟೆಗಳ ಕಾಲ ಶ್ರಮವಹಿಸಿ ಬಿಡಿಸಿದ್ದ `ಪದ್ಮಾವತಿ’ ರಂಗೋಲಿಯನ್ನು ಕೆಲ ಕಿಡಿಗೇಡಿಗಳು ಹಾಳು ಮಾಡಿದ್ದಾರೆ. ಪೋಸ್ಟರ್ ರೀತಿಯಲ್ಲಿ ಬಿಡಿಸಿದ್ದ ಪದ್ಮಾವತಿಯ ರಂಗೋಲಿ ಬಹು ಆಕರ್ಷಕವಾಗಿತ್ತು. ನೂರಕ್ಕೂ ಅಧಿಕ ಮಂದಿ ಮಾಲ್ ಮೇಲೆ ದಾಳಿ ಮಾಡಿ ಜೈ ಶ್ರೀರಾಮ್ ಘೋಷಣೆ ಕೂಗುತ್ತಾ ರಂಗೋಲಿಯನ್ನು ಹಾಳು ಮಾಡಿದ್ದಾರೆ.

ಇದರಿಂದ ಕೋಪಗೊಂಡಿರುವ ದೀಪಿಕಾ ಪಡುಕೋಣೆ ಟ್ವಿಟರ್ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸುವುದರ ಜತೆಗೆ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಕೇಂದ್ರ ಸಚಿವೆ ಸ್ಮೃತಿ ಇರಾನಿಯವರನ್ನು ಮನವಿ ಮಾಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿಯೂ ಈ ವಿಚಾರ ಭಾರೀ ಚರ್ಚೆಗೆ ಒಳಗಾಗಿದೆ.

ಶಾಹಿದ್ ಕಪೂರ್, ರಣವೀರ್ ಸಿಂಗ್, ದೀಪಿಕಾ ಪಡುಕೋಣೆ ಪ್ರಮುಖ ಪಾತ್ರದಲ್ಲಿ ನಟಿಸಿರುವ ‘ಪದ್ಮಾವತಿ’ ಚಿತ್ರ ಡಿಸೆಂಬರ್ 1 ರಂದು ಬಿಡುಗಡೆಯಾಗಲಿದೆ. (ವರದಿ-ಎಂ.ಎನ್)

 

Leave a Reply

comments

Related Articles

error: