ಸುದ್ದಿ ಸಂಕ್ಷಿಪ್ತ

ತ್ರಿಮತಸ್ಥ ಬ್ರಾಹ್ಮಣ ದಂಪತಿಗಳಿಗೆ ಶಾಂತಿ ಕಾರ್ಯಕ್ರಮ

ಸಂಧ್ಯಾ ಸುರಕ್ಷಾ ಟ್ರಸ್ಟ್(ರಿ), ಜಿಲ್ಲಾ ಬ್ರಾಹ್ಮಣ ಮಹಾಸಭಾ, ಕರ್ನಾಟಕ ಬ್ರಾಹ್ಮಣ ಹಿರಿಯ ನಾಗರೀಕ ವೇದಿಕೆ, ಬ್ರಾಹ್ಮಣ ಧರ್ಮಸಂಸ್ಕಾರ ಪ್ರತಿಷ್ಠಾನದ ವತಿಯಿಂದ ತ್ರಿಮತಸ್ಥ ಬ್ರಾಹ್ಮಣ ದಂಪತಿಗೆ ಸಾಮೂಹಿಕ ಶಾಂತಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ದುರ್ಮುಖಿ ಸಂವತ್ಸರದ ಮಾರ್ಗಶಿರ ಮಾಸದ ಡಿಸೆಂಬರ್ ತಿಂಗಳಿನಲ್ಲಿ ಧರ್ಮಾಧಿಕಾರಿಗಳು ಸಂಸ್ಕಾರದ ಪ್ರವರ್ತಕರಾದ ಬಿ.ಆರ್. ನಟರಾಜ್ ಯೋಜಿಸ್ ರವರ ನೇತೃತ್ವದಲ್ಲಿ ತ್ರಿಮತಸ್ಥ ಬ್ರಾಹ್ಮಣ 60, 70, 80 ನೇ ಉಗ್ರರಥ, ಭೀಮರಥ, ಸಹಸ್ರ ಚಂದ್ರದರ್ಶನದ ಷಷ್ಠ್ಯಾಬ್ಧಿಪೂರ್ತಿ ಶಾಂತಿ ಕಾರ್ಯಕ್ರಮವನ್ನು ಆಯಾ ಸಂಪ್ರದಾಯಕ್ಕೆ ಅನುಗುಣವಾಗಿ ಸ್ಮಾರ್ಥ, ಶ್ರೀವೈಷ್ಣವ, ಮಾಧ್ವ ನುರಿತ ಬ್ರಾಹ್ಮಣ ಪುರೋಹಿತರಿಂದ ವಿಶಾಲವಾದ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಲಾಗಿದೆ.

ಆಸಕ್ತ ದಂಪತಿಗಳು ಹೆಸರು ನೋಂದಾಯಿಸಬೇಕು. ಹೆಚ್ಚಿನ ಮಾಹಿತಿಗೆ, ಸಂಧ್ಯಾ ಸುರಕ್ಷಾ ಟ್ರಸ್ಟ್, ಜಿಲ್ಲಾ ಬ್ರಾಹ್ಮಣ ಮಹಾಸಭಾ ಕಚೇರಿ, ಉದಯರವಿ ಮುಖ್ಯರಸ್ತೆ, ಅಮ್ಮ ಕಾಂಪ್ಲೆಕ್ಸ್ ಹತ್ತಿರ, ರಾಮಕೃಷ್ಣ ನಗರ, ಮೈಸೂರು ಇಲ್ಲಿ ಅಥವಾ ದೂ.ಸಂ. 8088799540 ಅನ್ನು ಸಂಪರ್ಕಿಸಬಹುದು.

Leave a Reply

comments

Related Articles

error: