ಮೈಸೂರು

ಪಟಾಕಿಯಿಂದಾಗುವ ಅನಾಹುತದ ಕಡಿವಾಣಕ್ಕೆ ಕೆ.ಆರ್. ಆಸ್ಪತ್ರೆ ನೇತ್ರ ಚಿಕಿತ್ಸೆ ವಿಭಾಗ ದಿಂದ ಪ್ರತ್ಯೇಕ ವಾರ್ಡ್

ಮೈಸೂರು,ಅ.19:- ನಾಡಿನೆಲ್ಲೆಡೆ ದೀಪಾವಳಿ ಸಂಭ್ರಮ ಹಿನ್ನಲೆಯಲ್ಲಿ ಪಟಾಕಿಯಿಂದ ಆಗುವ ಅನಾಹುತಕ್ಕೆ ಕಡಿವಾಣ ಹಾಕಲು ಕೆ.ಆರ್. ಆಸ್ಪತ್ರೆ ನೇತ್ರ ಚಿಕಿತ್ಸೆ ವಿಭಾಗ ಮುಂದಾಗಿದೆ.

ಪಟಾಕಿಯಿಂದಾಗುವ ಅನಾಹುತಗಳಿಗೆ ಚಿಕಿತ್ಸೆ ನೀಡಲು ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ಪ್ರತ್ಯೇಕ ವಾರ್ಡ್ ರಚಿಸಲಾಗಿದ್ದು, ನೇತ್ರ ಚಿಕಿತ್ಸೆ ವಿಭಾಗದಲ್ಲಿ ಚಿಕಿತ್ಸೆ ನೀಡಲು ಹೆಚ್ಚುವರಿ  ವೈದ್ಯರ ನೇಮಕ ಮಾಡಲಾಗಿದೆ. ಬೆಳಕಿನ ಹಬ್ಬದಂದು ಬದುಕು ಕತ್ತಲಾಗದಿರಲಿ ಎಂದು ನೇತ್ರಚಿಕಿತ್ಸಾ ವಿಭಾಗದ ಹಿರಿಯ ವೈದ್ಯ ಡಾ.ಗೋಪಿನಾಥ್ ಮನವಿ ಮಾಡಿದ್ದಾರೆ. ದಿಪಾವಳಿ ಪ್ರಯುಕ್ತ ಎಲ್ಲರೂ ಪಟಾಕಿ ಹಚ್ಚುವುದರಲ್ಲಿ ತಲ್ಲೀನರಾಗುತ್ತಿದ್ದು, ಅದರಲ್ಲೂ ಮುಖ್ಯವಾಗಿ ಮಕ್ಕಳು ಕಣ್ಣು, ಕೈಕಾಲುಗಳನ್ನು ಸುಟ್ಟುಕೊಳ್ಳುವ ಸಂದರ್ಭ ಬರಬಹುದು. ಅದರಲ್ಲೂ ಮಕ್ಕಳು ಭಯದಿಂದ ಬೊಬ್ಬಿರಿಯುವುದು ಹೆಚ್ಚು. ಅಂಥಹ ಸಂದರ್ಭದಲ್ಲಿ ಅವರನ್ನು ಪ್ರತ್ಯೇಕವಾಗಿರಿಸಿ ಚಿಕಿತ್ಸೆ ನೀಡುವ ಅಗತ್ಯವಿದ್ದು, ಕೆ.ಆರ್.ಆಸ್ಪತ್ರೆಯ ನೇತ್ರ ಚಿಕಿತ್ಸಾ ವಿಭಾಗ ಅನಾಹುತಕ್ಕೆ ಕಡಿವಾಣ ಹಾಕಲು ಮುಂದಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: