ಮೈಸೂರುಸುದ್ದಿ ಸಂಕ್ಷಿಪ್ತ

ನ. 14ರಂದು ಮಕ್ಕಳ ಹಕ್ಕುಗಳ ಜಾಗೃತಿ ಅಭಿಯಾನ

ಗುಡ್ ಶೆಫರ್ಡ್ ಕಾನ್ವೆಂಟ್ ಸಂಯುಕ್ತ ಪಿಯು ಕಾಲೇಜು ವತಿಯಿಂದ ನ.14ರಂದು ಮಕ್ಕಳ ದಿನಾಚರಣೆ ಅಂಗವಾಗಿ ‘ಮಕ್ಕಳ ಹಕ್ಕುಗಳ ರಕ್ಷಣೆ ಮತ್ತು ಜಾಗೃತಿ’ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಸಮಾಜವು ಮಕ್ಕಳ ಕುರಿತು ಸಕಾರಾತ್ಮಕವಾಗಿ ಯೋಚಿಸುವ ರೀತಿಯಲ್ಲಿ ತಿಳಿವಳಿಕೆ ಮೂಡಿಸುವ ಉದ್ದೇಶದೊಂದಿಗೆ ಅಭಿಯಾನವು ಅಂದು ಬೆಳಗ್ಗೆ 8.30ಕ್ಕೆ ಗುಡ್ ಶೆಫರ್ಡ್ ಕಾನ್ವೆಂಟ್ ಶಾಲೆಯ ಮೈದಾನದಿಂದ ಹೊರಟು ಅಶೋಕ ರಸ್ತೆ, ಅರಮನೆ ದ್ವಾರದ ವೃತ್ತ, ಆಲ್ಬರ್ಟ್ ವಿಕ್ಟರ್ ರಸ್ತೆ, ಹಾರ್ಡಿಂಜ್ ವೃತ್ತ, ಗ್ರಾಮಾಂತರ ಬಸ್ ನಿಲ್ದಾಣದ ಮೂಲಕ ಸಂತ ಮದರ್ ತೆರೆಸಾ ರಸ್ತೆ ಮೂಲಕ ಮರಳಿ ಗುಡ್ ಶೆಫರ್ಡ್ ಕಾನ್ವೆಂಟ್ ಶಾಲೆಯ ಮೈದಾನಕ್ಕೆ ಮಧ್ಯಾಹ್ನ 12.30ಕ್ಕೆ ವಾಪಸಾಗಲಿದೆ.

ಮುಖ್ಯ ಅತಿಥಿಯಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಮೈಸೂರು ಇದರ ಸಹನಿರ್ದೇಶಕರಾದ ರಾಧ ಕೆ, ಗೌರವಾನ್ವಿತ ಅತಿಥಿಯಾಗಿ ಕರ್ನಾಟಕ ಪೊಲೀಸ್ ಅಕಾಡಮಿ ಮೈಸೂರು ಇದರ ಸಹಾಯಕ ನಿರ್ದೇಶಕರಾದ ಡಾ. ಧರಣಿ ದೇವಿ ಮಾಲಗತ್ತಿ ಮತ್ತು ರೋಟರಿ ಇಂಟರ್ ನ್ಯಾಷನಲ್ ಮೈಸೂರು ಗವರ್ನರ್ ರೋಟ್ರಿಯನ್ ಡಾ. ನಾಗಾರ್ಜುನ ಅವರು ಪಾಲ್ಗೊಳ್ಳಲಿದ್ದಾರೆ. ಜೊತೆಗೆ ಅಭಿಯಾನದಲ್ಲಿ ವಿವಿಧ ಶಾಲೆಗಳ ಸುಮಾರು ಎರಡು ಸಾವಿರ ವಿದ್ಯಾರ್ಥಿಗಳ ಪಾಲ್ಗೊಳ್ಳುವ ನಿರೀಕ್ಷೆ ಇದೆ.

ಅಭಿಯಾನದ ಮುಖ್ಯ ಉದ್ದೇಶಗಳಿವು:

  • ಶಾಲಾ ವಿದ್ಯಾರ್ಥಿಗಳಿಗೆ ಮಕ್ಕಳ ಹಕ್ಕುಗಳ ಕುರಿತು ಅರಿವು ಮೂಡಿಸುವುದು.
  • ಹೆಣ್ಣುಮಕ್ಕಳ ಹಕ್ಕುಗಳ ಕುರಿತು ತಿಳಿವಳಿಕೆ
  • ಮಕ್ಕಳ ಹಕ್ಕುಗಳ ಒಕ್ಕೂಟ/ ಮಕ್ಕಳ ಹಕ್ಕುಗಳ ಕ್ಲಬ್ ಪರಿಕಲ್ಪನೆ ಕುರಿತು ಮಾಹಿತಿ
  • ಮಕ್ಕಳ ಪೋಷಣೆ ಮತ್ತು ರಕ್ಷಣೆಗಾಗಿ “ಮಕ್ಕಳ ಕಾವಲು ಸಮಿತಿ” ರಚನೆ
  • ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳು ಮರಳಿ ಶಾಲೆಗೆ ಸೇರಲು ಉತ್ತೇಜನ
  • ಬಾಲಕಾರ್ಮಿಕ/ದುಡಿಯುವ ಮಕ್ಕಳನ್ನು ಬಿಡುಗಡೆಗೊಳಿಸಿ, ವಿದ್ಯಾಭ್ಯಾಸ ಮುಂದುವರೆಸಲು ಪ್ರೋತ್ಸಾಹ
  • ಮಕ್ಕಳ ಸಂರಕ್ಷಣೆಯಲ್ಲಿ ಪೋಷಕರ ಮತ್ತು ಸಮಾಜದ ಪಾತ್ರ
  • ಹೆಣ್ಣುಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯ ತಡೆಗಟ್ಟುವುದು
  • ಸಮಾಜದಲ್ಲಿ ಹೆಣ್ಣುಮಕ್ಕಳ ಹಕ್ಕುಗಳ ಉಲ್ಲಂಘನೆ ಬಗ್ಗೆ ಅರಿವು ಮೂಡಿಸುವುದು
  • ಹೆಣ್ಣುಮಕ್ಕಳ ಕುರಿತು ಸಮಾಜ ಸಕಾರಾತ್ಮಕವಾಗಿ ಚಿಂತಿಸುವಂತೆ ಪ್ರೇರೇಪಿಸುವುದು.

Leave a Reply

comments

Related Articles

error: