ಮೈಸೂರುಸುದ್ದಿ ಸಂಕ್ಷಿಪ್ತ

ಇಂದು ಗ್ರೀಸಿಹ್ಯಾಂಡ್ಸ್ ಮೊಬೈಲ್ ಆ್ಯಪ್ ಲಾಂಚ್

ಬೈಕ್ ಸರ್ವೀಸಿಂಗ್ ಸುಲಭಗೊಳಿಸಲು ಮೈಸೂರಿನ ಇನ್ಫೋಸಿಸ್ ಉದ್ಯೋಗಿಯೊಬ್ಬರು ಆರಂಭಿಸಿರುವ ‘ಗ್ರೀಸಿಹ್ಯಾಂಡ್ಸ್’ ಸಂಸ್ಥೆಯ ಮೊಬೈಲ್ ಆ್ಯಪ್ ಅನ್ನು ಮೈಸೂರು ಮಹಾನಗರ ಪಾಲಿಕೆ ಸದಸ್ಯ ಸ್ನೇಕ್ ಶ್ಯಾಮ್ ಅವರು ಬಿಡುಗಡೆ ಮಾಡಲಿದ್ದಾರೆ.

‘ಗ್ರೀಸಿಹ್ಯಾಂಡ್ಸ್’ ಒಂದು ಸ್ಟಾರ್ಟಪ್ ಸಂಸ್ಥೆಯಾಗಿದ್ದು, ದ್ವಿಚಕ್ರ ವಾಹನ ಸವಾರರನ್ನು ಸರ್ವೀಸ್ ಸ್ಟೇಷನ್ ನೊಂದಿಗೆ ಸಂಪರ್ಕಿಸುವ ಮೊಬೈಲ್ ಆ್ಯಪ್ ಆಗಿದೆ. ವಾಹನ ಸವಾರರು ಮನೆ ಅಥವಾತ ಕಚೇರಿಯಿಂದಲೇ ಈ ಆ್ಯಪ್ ಮೂಲಕ ಸಂಪರ್ಕ ಸಾಧಿಸಿ ತಮ್ಮ ವಾಹನಗಳನ್ನು ಸರ್ವೀಸ್ ಗೆ ಕೊಡಬಹುದು ಮತ್ತು ಸರ್ವೀಸ್ ಕುರಿತು ಮಾಹಿತಿ ಪಡೆಯಬಹುದು.

ಕಾರ್ಯಕ್ರಮವು ನ.8ರಂದು ಸಂಜೆ 5 ಗಂಟೆಗೆ ಎಲ್&ಟಿ 2ನೇ ಗೇಟ್ ಎದುರು ನಡೆಯಲಿದೆ. ಇದೇ ಸಂದರ್ಭ ಬೈಕ್ ರ್ಯಾಲಿಯನ್ನು ಕೂಡ ಆಯೋಜಿಸಲಾಗಿದೆ.

ಹೆಚ್ಚಿನ ಮಾಹಿತಿಗೆ, ‘ಗ್ರೀಸಿ ಹ್ಯಾಂಡ್ಸ್’ # 1201, 18ನೇ ಕ್ರಾಸ್, ಕಾವೇರಿ ಸರ್ಕಲ್, ಹೆಬ್ಬಾಳ 2ನೇ ಹಂತ, ಮೈಸೂರು 17, ಮೊಬೈಲ್ ಸಂಖ್ಯೆ 9964815684 ಅನ್ನು ಸಂಪರ್ಕಿಸಬಹುದು ಅಥವಾ www.facebook.com/greesyhands ಅನ್ನು ನೋಡಬಹುದು.

Leave a Reply

comments

Related Articles

error: