ಮೈಸೂರುಸುದ್ದಿ ಸಂಕ್ಷಿಪ್ತ

ದಾವಣಗೆರೆ-ಮೈಸೂರು ಹೊಸ ವೋಲ್ವೊ ಬಸ್ ಸೇವೆ ಆರಂಭ

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಮಗ, ದಾವಣಗೆರೆ ವಿಭಾಗವು ದಾವಣಗೆರೆಯಿಂದ ಮೈಸೂರಿಗೆ “ಚಿತ್ರದುರ್ಗ-ಹಿರಿಯೂರು-ಹುಳಿಯಾರು-ತುರುವೇಕೆರೆ” ಮಾರ್ಗವಾಗಿ ಹೊಸ ವೋಲ್ವೋ ಬಸ್ ಆರಂಭಿಸುತ್ತಿರುವುದಾಗಿ ತಿಳಿಸಿದೆ.

ದಾವಣಗೆರೆಯಿಂದ ರಾತ್ರಿ 10.30ಕ್ಕೆ ಹೊರಡುವ ಬಸ್ಸು ಬೆಳಗ್ಗೆ 4 ಗಂಟೆಗೆ ಮೈಸೂರು ತಲುಪಲಿದೆ. ಮೈಸೂರಿನಿಂದ ರಾತ್ರಿ 9 ಕ್ಕೆ ಹೊರಡುವ ಬಸ್ಸು ದಾವಣಗೆರೆಯನ್ನು ಬೆಳಗ್ಗೆ 4.30ಕ್ಕೆ ತಲುಪಲಿದೆ. ಟಿಕೆಟ್ ದರ ರೂ.500/-

ವಾಹನದಲ್ಲಿ ಹವಾನಿಯಂತ್ರಣ ವ್ಯವಸ್ಥೆ ಇರಲಿದ್ದು, ಬ್ಲಾಂಕೇಟ್, ಮೊಬೈಲ್ ಚಾರ್ಜರ್, ಮಿನರಲ್ ವಾಟರ್ ಬಾಟಲ್, ನುರಿತ ಚಾಲಕ ಮತ್ತು ನಿರ್ವಾಹಕರು ಸೌಲಭ್ಯ ಇರಲಿದೆ.

ಹೆಚ್ಚಿನ ಮಾಹಿತಿಗೆ ದಾವಣಗೆರೆ ಘಟಕ ವ್ಯವಸ್ಥಾಪಕರನ್ನು ದೂ.ಸಂ. 7760990463 ಮೂಲಕ ಮತ್ತು ದಾವಣಗೆರೆ ಬಸ್ ನಿಲ್ದಾಣ ದೂ.ಸಂ. 7022030175, ಮೈಸೂರು ಬಸ್ ನಿಲ್ದಾಣದ ದೂ.ಸಂ. 7760990821 ಅನ್ನು ಸಂಪರ್ಕಿಸಬಹುದು. www.ksrtc.in ಮೂಲಕವೂ ಟಿಕೆಟ್ ಬುಕಿಂಗ್ ಮಾಡಬಹುದು ಅಥವಾ ಕೆಎಸ್ಆರ್ಟಿಸಿ ಬುಕಿಂಗ್ ಕೌಂಟರ್ ಗಳನ್ನು ಸಂಪರ್ಕಿಸಬಹುದು.

Leave a Reply

comments

Related Articles

error: