ಸುದ್ದಿ ಸಂಕ್ಷಿಪ್ತ

ಔಷಧಿ ರಹಿತ ಚಿಕಿತ್ಸೆ ಬಗ್ಗೆ ಉಪನ್ಯಾಸ

ಔಷಧ ಶಾಸ್ತ್ರದ ಪಿತಾಮಹ ಹಿಪೋಕ್ರೈಟಿಸ್ ರವರ “ನಿಮ್ಮ ಆಹಾರವೇ ನಿಮ್ಮ ಔಷಧ’ (Let food be thy Medicines) ಎಂಬ ಅಭಿಲಾಷೆಯಂತೆ ಯಾವುದೇ ಔಷಧಗಳನ್ನು ಉಪಯೋಗಿಸದೆ ದೇಶೀಯ ಪುರಾತನ ನಿಸರ್ಗ ಚಿಕಿತ್ಸೆ ಅನುಸರಿಸಿ ಆರೋಗ್ಯವಂತರಾಗುವ ಬಗ್ಗೆ ರಾಜ್ಯಾದ್ಯಂತ ಹಲವಾರು ಉಪನ್ಯಾಸ ನೀಡಿರುವ ಖ್ಯಾತ ನಿಸರ್ಗೋಪಚಾರ ತಜ್ಞ, ಇಂಟರ್ ನ್ಯಾಷನಲ್ ಹ್ಯುಮೆನಿಟೇರಿಯನ್ ಅವಾರ್ಡಿ ಡಾ. ನಂ. ನಂಜೇಶ್ ಕೊಪ್ಪ ಅವರು ಉಚಿತ ಉಪನ್ಯಾಸ ನೀಡಲಿದ್ದಾರೆ.

ಕಾರ್ಯಕ್ರಮವು ನ. 8, ಮಂಗಳವಾರದಂದು ಬೆಳಗ್ಗೆ 10.35ಕ್ಕೆ ಮತ್ತು ಸಂಜೆ 6.30ಕ್ಕೆ ಜಿಲ್ಲಾ ಕನ್ನಡ ಸಾಹಿತ್ಯ ಭವನ, ಜಿಲ್ಲಾ ಕನ್ನಡ ಸಾಹಿತ್ಯ ಭವನ ರಸ್ತೆ, ಕುವೆಂಪು ಟ್ರಸ್ಟ್ ಹತ್ತಿರ, ವಿಜಯನಗರ 1ನೇ ಹಂತ, ಮೈಸೂರು – ಇಲ್ಲಿ ನಡೆಯಲಿದೆ.

ಆಸಕ್ತರು 10 ನಿಮಿಷ ಮುಂಚಿತವಾಗಿ ಬರಬೇಕು. ಹೆಚ್ಚಿನ ವಿವರಗಳಿಗೆ 9964806880 ಸಂಖ್ಯೆಯನ್ನು ಸಂಪರ್ಕಿಸಬಹುದು.

 

Leave a Reply

comments

Related Articles

error: