ಮೈಸೂರುಸುದ್ದಿ ಸಂಕ್ಷಿಪ್ತ

ನ.10 ರಂದು ಸಣ್ಣ ಕೈಗಾರಿಕೆಗಳಿಗೆ ಸಾಲ ಸಹಾಯಧನ, ಮುದ್ರ ಯೋಜನೆ ಕುರಿತು ಅರಿವು

ರಾಜ್ಯದಲ್ಲಿ ಶೇ. 93 ರಷ್ಟ ಸಣ್ಣ ಕೈಗಾರಿಕಗಳು ಖಾಸಗಿ ಸಾಲದ ನೆರವಿನೊಂದಿಗೆ ಕಾರ್ಯನಿರ್ವಹಿಸುದ್ದಿತ್ತು ದುಬಾರಿ ಬಡ್ಡಿ ದರ ಹಾಗೂ ಬಿಗಿ ವಸೂಲಾತಿ ಕ್ರಮಗಳಿಂದ ಕೈಗಾರಿಕೆಗಳು ಸಂಕಷ್ಟದಲ್ಲಿವೆ.

ಈ ಹಿನ್ನೆಲೆಯಲ್ಲಿ ಭಾರತ ಸರ್ಕಾರದ ಮೇಕ್ ಇನ್ ಇಂಡಿಯಾ ಕಲ್ಪನೆಯೊಂದಿಗೆ ಸಣ್ಣ ಕೈಗಾರಿಕೆಗಳಿಗೆ ಭದ್ರತೆ ರಹಿತ ಸಾಲ, ಸಾಲ ಆಧಾರಿತ ಬಂಡವಾಳ ಸಹಾಯಧನ, ರಿಯಾಯಿತಿಗಳ ಬಗ್ಗೆ ಅರಿವು ಮೂಸಿಸುವ ಸಲುವಾಗಿ ಒಂದು ದಿನದ ಕಾರ್ಯಕ್ರಮವನ್ನು ನ.10, ಗುರುವಾರದಂದು ಮೈಸೂರಿನ ಚಾಮರಾಜಪುರಂ ಬಲ್ಲಾಳ ವೃತ್ತದ ಬಳಿ ಇರುವ ಹೋಟೆಲ್ ನಿತ್ಯೋತ್ಸವದಲ್ಲಿ ಬೆಳಗ್ಗೆ 11 ಗಂಟೆಗೆ ಆಯೋಜಿಸಲಾಗಿದೆ.

ಜಿಲ್ಲಾ ಕೈಗಾರಿಕಾ ಕೇಂದ್ರ – ಮೈಸೂರು, ಸಿಂಡಿಕೇಟ್ ಬ್ಯಾಂಕ್ – ಮೈಸೂರು, ಮೈಸೂರು ಕೈಗಾರಿಕೆಗಳ ಸಂಘ ಮತ್ತು ಸೂಕ್ಷ್ಮ ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳ ಪರಿಷತ್ತು ಸಂಯುಕ್ತವಾಗಿ ಕಾರ್ಯಕ್ರಮವನ್ನು ಆಯೋಜಿಸಿವೆ.

ರಾಜ್ಯ ಮಟ್ಟದ ಬ್ಯಾಂಕ್ಸ್ ಸಮಿತಿಯ ಮಾರ್ಗದರ್ಶಿ ಬ್ಯಾಂಕ್ ಆದ ಸಿಂಡಿಕೇಟ್ ಬ್ಯಾಂಕ್ನ ಬೆಂಗಳೂರಿನ ಕ್ಷೇತ್ರ ಪ್ರಧಾನ ವ್ಯವಸ್ಥಾಪಕರಾದ ಅತುಲ್ ಕುಮಾರ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಶಾಸಕರು ಹಾಗೂ ಮೈಸೂರು ಕೈಗಾರಿಕೆಗಳ ಸಂಘದ ಅಧ್ಯಕ್ಷರಾದ ವಾಸು ಅವರು ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ವಿದ್ಯಾವರ್ಧಕ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಗಳಾದ ಪಿ. ವಿಶ್ವನಾಥ್, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರಾದ ಎಚ್. ರಾಮಕೃಷ್ಣೇಗೌಡ, ಸಿಂಡಿಕೇಟ್ ಬ್ಯಾಂಕ್ ನ ಉಪ ಪ್ರಧಾನ ವ್ಯವಸ್ಥಾಪಕರಾದ ಎಸ್. ರಾಮರಾವ್ ಅವರು ಭಾಗವಹಿಸಲಿದ್ದಾರೆ.

ಹೊಸದಾಗಿ ಕೈಗಾರಿಕೆ ಪ್ರಾರಂಭಿಸಲಿರುವವರು ಹಾಗೂ ಪ್ರಸ್ತುತ ನಡೆಸುತ್ತಿರುವ ಉದ್ಯಮವನ್ನು ವಿಸ್ತರಣೆ ಮಾಡಬಯಸುವ ಉದ್ಯಮಿಗಳೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಬಹುದಾಗಿದೆ.

ಪ್ರವೇಶ ಉಚಿತವಾದರೂ ಆಸಕ್ತರು ನವೆಂಬರವ 8 ರೊಳಗೆ ಮೈಸೂರು ಕೈಗಾರಿಕೆಗಳ ಸಂಘ, ಕೆ.ಐ.ಎ.ಡಿಬಿ, ಕೆ.ಆರ್.ಎಸ್. ರಸ್ತೆ, ಮೈಸೂರು ಅಥವಾ ಸೂಕ್ಷ್ಮ ಸಣ್ಣ ಮತ್ತು ಮಧ್ಯಮ ಉದ್ಯಮಗಳ ಪರಿಷತ್, ನಂ.1090, ನ್ಯಾಯಾಲಯದ ಎದುರು, ವಿಷ್ಣುವರ್ಧನ ರಸ್ತೆ, ಮೈಸೂರು ಈ ಕಚೇರಿಗಳಲ್ಲಿ ನೋಂದಾಯಿಸಬೇಕೆಂದು ಮೈಸೂರು ಕೈಗಾರಿಕೆಗಳ ಸಂಘದ ಪ್ರಧಾನ ಕಾರ್ಯದರ್ಶಿ ಎನ್. ಸತೀಶ್ ಹಾಗೂ ಕಾರ್ಯದರ್ಶಿ ಸುರೇಶ್ ಕುಮಾರ್ ಜೈನ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ವಿವರಗಳಿಗೆ ಮೊ. 9964620909 ಅಥವಾ [email protected] ಅಥವಾ ಸಿಂಡಿಕೇಟ್ ಬ್ಯಾಂಕ್, ಮೊಬೈಲ್ ಸಂಖ್ಯೆ: 9449860457 ರ ಮೂಲಕ ಸಂಪರ್ಕಿಸಬಹುದು ಎಂದು ಮೈಸೂರು ಕೈಗಾರಿಕೆಗಳ ಸಂಘದ ಕಾರ್ಯದರ್ಶಿ ಸುರೇಶ್ ಕುಮಾರ್ ಜೈನ್ ಅವರು ತಿಳಿಸಿದ್ದಾರೆ.

Leave a Reply

comments

Related Articles

error: