ಮೈಸೂರುಸುದ್ದಿ ಸಂಕ್ಷಿಪ್ತ

ನಗರ ಅಭಿವೃದ್ಧಿ ಕುರಿತು ರಾಷ್ಟ್ರಮಟ್ಟದ ಸಮ್ಮೇಳನ

ಮೈಸೂರು ವಿಶ್ವವಿದ್ಯಾನಿಲಯದ ಸಾಮಾಜಿಕ ಹೊರಗುಳಿಯುವಿಕೆ ಮತ್ತು ಒಳಗೊಳ್ಳುವಿಕೆಯ ನೀತಿ ಅಧ್ಯಯನ ಕೇಂದ್ರವು ಐಸಿಎಸ್ಎಸ್ಆರ್ ಪ್ರಾಯೋಜಕತ್ವದಲ್ಲಿ “ಭಾರತ ನಗರ ಪ್ರದೇಶಗಳಲ್ಲಿ ಬಡತನ, ಅಸಮಾನತೆ ಮತ್ತು ಹೊರಗುಳಿಯುವಿಕೆ: ಒಂದು ಚರ್ಚೆ” ಎಂಬ ವಿಚಾರ ಕುರಿತು 2017ರ ಜನವರಿ 18 ಮತ್ತು 19 ರಂದು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ರಾಷ್ಟ್ರಮಟ್ಟದ ಸಮ್ಮೇಳನವನ್ನು ಏರ್ಪಡಿಸಿದೆ.

ದೇಶದ ವಿವಿಧೆಡೆಗಳಿಂದ ವಿಷಯತಜ್ಞರು ವಿಚಾರ ಸಂಕಿರಣದಲ್ಲಿ ಪಾಲ್ಗೊಳ್ಳಲಿದ್ದು, ಕರ್ನಾಟಕಕ್ಕೆ ವಿಶೇಷ ಒತ್ತು ನೀಡಿದಂತೆ ಬಡತನ, ಅಸಮಾನತೆ, ಹೊರಗುಳಿಯುವಿಕೆ ಮತ್ತಿ ಇತರ ನಗರ ಸಮಸ್ಯೆಗಳ ಕುರಿತು ವಿಚಾರ ಸಂಕಿರಣದಲ್ಲಿ ಸುದೀರ್ಘ ಚರ್ಚೆ ನಡೆಯಲಿದೆ. ಆಸಕ್ತ ಸಂಶೋಧಕರು ಕಾಲೇಜು ಶಿಕ್ಷಕರು ಸಮಾಜ ವಿಜ್ಞಾನಿಗಳು ಮತ್ತು ಸ್ವಯಂಸೇವಾ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಬಹುದು.

ಹೆಚ್ಚಿನ ಮಾಹಿತಿಗೆ ಮೈಸೂರು ವಿಶ್ವವಿದ್ಯಾನಿಲಯದ ಜಾಲತಾಣ ನೋಡಬಹುದು ಅಥವಾ ಸಮ್ಮೇಳನದ ಕಾರ್ಯದರ್ಶಿ ಡಾ. ದಿನೇಶ್ ಅವರನ್ನು ದೂ.ಸಂ. 0821-2419637, 9538431672 ಮೂಲಕ ಕಚೇರಿ ವೇಳೆಯಲ್ಲಿ ಸಂಪರ್ಕಿಸಬಹುದು.

Leave a Reply

comments

Related Articles

error: