ಸುದ್ದಿ ಸಂಕ್ಷಿಪ್ತ

ನೋವು ನಿವಾರಣಾ ವಿಶೇಷ ಚಿಕಿತ್ಸಾ ಸಪ್ತಾಹ

ಮಡಿಕೇರಿ,ಅ.19-ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಆಯುಷ್ ಇಲಾಖೆ ವತಿಯಿಂದ ರಾಷ್ಟ್ರೀಯ ಆಯುರ್ವೇದ ದಿನಾಚರಣೆ ಪ್ರಯುಕ್ತ ನೋವು ನಿವಾರಣಾ ವಿಶೇಷ ಚಿಕಿತ್ಸಾ ಸಪ್ತಾಹವು ನಗರದ ಜಿಲ್ಲಾ ಆಯುಷ್ ಆಸ್ಪತ್ರೆಯಲ್ಲಿ ನಡೆಯಿತು.

ನಗರಸಭೆ ಅಧ್ಯಕ್ಷರಾದ ಕಾವೇರಮ್ಮ ಸೋಮಣ್ಣ ಅವರು ವಿಶೇಷ ಚಿಕಿತ್ಸಾ ಸಪ್ತಾಹಕ್ಕೆ ಚಾಲನೆ ನೀಡಿ ಮಾತನಾಡಿ ಉತ್ತಮ ಆರೋಗ್ಯಕ್ಕೆ ಆಯುರ್ವೇದ ಚಿಕಿತ್ಸೆ ಪಡೆಯುವುದು ಅಗತ್ಯ ಎಂದರು.

ಜಿಲ್ಲಾ ಆಯುಷ್ ಅಧಿಕಾರಿ ರಾಮಚಂದ್ರ ಅವರು ಮಾತನಾಡಿ, ಜಿಲ್ಲಾ ಆಯುರ್ವೇದ ಆಸ್ಪತ್ರೆಯಲ್ಲಿ ಅ.23 ರವರೆಗೆ ನೋವು ನಿವಾರಣಾ ಆಯುರ್ವೇದ ಶಿಬಿರ ನಡೆಯಲಿದೆ ಎಂದು ಅವರು ಮಾಹಿತಿ ನೀಡಿದರು.

ಮಂಡಿ, ಕತ್ತು, ಬೆನ್ನು, ಸೊಂಟ, ಭುಜ, ತಲೆ ಹೀಗೆ ನಾನಾ ರೀತಿಯ ನೋವುಗಳಿಗೆ ತಜ್ಞ ಆಯುರ್ವೇದ ವೈದ್ಯರಿಂದ ತಪಾಸಣೆ ನಡೆಸಿ ಉಚಿತ ಔಷಧ ವಿತರಣೆ ಮಾಡಲಾಯಿತು. ಹಲವು ಮಂದಿ ನೋವು ನಿವಾರಣಾ ವಿಶೇಷ ಶಿಬಿರದಲ್ಲಿ ಪಾಲ್ಗೊಂಡಿದ್ದರು.

ಅಶ್ವಿನಿ ಆಸ್ಪತ್ರೆಯ ವೈದ್ಯರಾದ ಡಾ.ಕುಲಕರ್ಣಿ ಇತರರು ಪಾಲ್ಗೊಂಡಿದ್ದರು. (ವರದಿ-ಕೆಸಿಐ, ಎಂ.ಎನ್)

Leave a Reply

comments

Related Articles

error: