ಮೈಸೂರು

ಪೌರಕಾರ್ಮಿಕರೊಡಗೂಡಿ ಪಟಾಕಿ ಅವಶೇಷಗಳನ್ನು ತೆಗೆದು ಸ್ವಚ್ಛತಾಕಾರ್ಯ ನಡೆಸಿದ ಮನಪಾ ಸದಸ್ಯ

ಮೈಸೂರು,ಅ.21:- ದೀಪಾವಳಿಯ ಸಮಯದಲ್ಲಿ ಮೂರು ದಿನಗಳ ಕಾಲ ಪಟಾಕಿ ಪ್ರಿಯರು ಪಟಾಕಿ ಸಿಡಿಸಿ ನಗರದ ರಸ್ತೆಗಳಲ್ಲಿ ಪಟಾಕಿ ಸಿಡಿದ ತುಣುಕುಗಳೇ ಕಂಡು ಬರುತ್ತಿದ್ದವು. ಪಟಾಕಿ ಮಳಿಗೆಗಳನ್ನಿಟ್ಟವರು ಪಟಾಕಿಯ ಕಾಗದದ ತುಣುಕುಗಳು, ಪ್ಲಾಸ್ಟಿಕ್ ಪೇಪರ್ ಗಳನ್ನು ಸ್ಥಳದಲ್ಲಿ ಹಾಗೆಯೇ ಬಿಟ್ಟು ಮರಳಿದ್ದಾರೆ. ಶನಿವಾರ ಪಟಾಕಿ ಮಳಿಗೆಗಳ ಜಾಗದಲ್ಲಿ ಸ್ವಚ್ಛತಾ ಕಾರ್ಯ ನಡೆದಿದೆ.

ದೀಪಾವಳಿಗೆ  ಪಟಾಕಿ  ಪ್ರಿಯರಿಗಾಗಿ ತೆರೆದುಕೊಂಡ ಪಟಾಕಿ ಮಳಿಗೆಗಳಲ್ಲಿ ಪಟಾಕಿ ಕೊಂಡೊಯ್ದ ನಂತರ ಅಳಿದುಳಿದ ಅವಶೇಷಗಳನ್ನು ಅಲ್ಲಿಯೇ ಬಿಟ್ಟು ತೆರಳಿದ್ದಾರೆ. ಅದನ್ನು  ಮನಪಾ ಸದಸ್ಯ ಮ.ವಿ.ರಾಂಪ್ರಸಾದ್ ಅವರು  ಜೆಎಲ್ ಬಿ ರಸ್ತೆಯ ಚಾಮುಂಡಿಪುರಂ ವೃತ್ತದ ಬಳಿ  ಪೌರಕಾರ್ಮಿಕರೊಡಗೂಡಿ ಸ್ವಚ್ಛತಾ ಕಾರ್ಯ ನಡೆಸಿದರು.  ಪೌರ ಕಾರ್ಮಿಕರ ಜೊತೆಗೂಡಿ ಮಳಿಗೆಗಳು,ರಸ್ತೆಗಳನ್ನು ಸ್ವಚ್ಛಗೊಳಿಸಿದರು. ವಾರ್ಡ್ ನಂ6 ರ ಪಾಲಿಕೆ ಸದಸ್ಯರು ಮತ್ತವರ ತಂಡ ಸಿಡಿದ ಪಟಾಕಿಗಳನ್ನು ಸ್ವಚ್ಛಗೊಳಿಸುವ  ಅಭಿಯಾನ ನಡೆಸಿದರು. ಶುಕ್ರವಾರ ದಿಪಾವಳಿಯ ಕೊನೆಯ ದಿನವಾಗಿದ್ದು ಪಟಾಕಿ ಪ್ರಿಯರು ಮನಸೋ ಇಚ್ಛೆ ಪಟಾಕಿ ಸಿಡಿಸಿದ್ದಾರೆ. ನಗರದ  ಹಲವು ರಸ್ತೆಗಳಲ್ಲಿ ಪಟಾಕಿ ತುಣುಕುಗಳೇ ಕಣ್ಣಿಗೆ ರಾಚುತ್ತಿವೆ. ಕೆಲವು ಮನೆಗಳ ಮುಂದೆ ಪಟಾಕಿ ಸಿಡಿಸಿ ಅದನ್ನು ಬದಿಗೆ ಒಟ್ಟುಗೂಡಿಸಿಡದೇ  ಪೌರಕಾರ್ಮಿಕರು ಕೊಂಡೊಯ್ಯುತ್ತಾರೆ ಎಂದು ಹಾಗೆಯೇ ಬಿಟ್ಟಿದ್ದಾರೆ. ಅದು ಗಾಳಿಗೆ ಎಲ್ಲೆಂದರಲ್ಲಿ ಹಾರುತ್ತಿದೆ. ಅಷ್ಟೇ ಅಲ್ಲದೇ ಪಾದಚಾರಿಗಳು ಅದನ್ನು ತುಳಿದುಕೊಂಡೇ ಸಾಗಬೇಕಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: