ಸುದ್ದಿ ಸಂಕ್ಷಿಪ್ತ

ವಿವಿಧ ಘಟಕಗಳಿಗೆ ಪದಾಧಿಕಾರಿಗಳ ನೇಮಕ

ಸೋಮವಾರಪೇಟೆ,ಅ.21:- ಭಾರತೀಯ ರಾಷ್ಟ್ರೀಯ ಮಜ್ದೂರ್ ಕಾಂಗ್ರೆಸ್(ಐಎನ್‍ಟಿಯುಸಿ)ನ ವಿವಿಧ ಘಟಕಗಳಿಗೆ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದು ಐಎನ್‍ಟಿಯುಸಿ ರಾಜ್ಯ ಉಪಾಧ್ಯಕ್ಷ ನಾಪಂಡ ಮುತ್ತಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಂಘಟನೆಯನ್ನು ಮತ್ತಷ್ಟು ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ಜಿಲ್ಲೆ, ತಾಲೂಕು ಹಾಗು ನಗರ ಘಟಕಗಳಿಗೆ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದ್ದು, ಕೊಡಗು ಜಿಲ್ಲಾ ಘಟಕದ ಕಾರ್ಯದರ್ಶಿಗಳನ್ನಾಗಿ ಚೌಡ್ಲು ಗ್ರಾಮದ ಸಿ.ಕೆ. ಅಶ್ರಫ್, ಎಂ.ಡಿ. ಬ್ಲಾಕ್‍ನ ಮೋಹನ್, ಯುವ ಘಟಕದ ಸಹ ಕಾರ್ಯದರ್ಶಿಯಾಗಿ ಚೌಡ್ಲು ಗ್ರಾಮದ ಸಿ.ವಿ. ಮಹಮ್ಮದ್ ಆಲಿ, ತಾಲೂಕು ಘಟಕದ ಕಾರ್ಯದರ್ಶಿಯಾಗಿ ಕಲ್ಕಂದೂರು ಗ್ರಾಮದ ಕೆ.ಎ. ಅಶ್ರಫ್, ಸಂಘಟನಾ ಕಾರ್ಯದರ್ಶಿಯಾಗಿ ಗಾಂಧಿ ನಗರದ ದುರ್ಗೇಶ್ ನೇಮಕ ಮಾಡಲಾಗಿದೆ.   ಸೋಮವಾರಪೇಟೆ ನಗರ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ ರೇಂಜರ್ ಬ್ಲಾಕ್‍ನ ಮಹಮ್ಮದ್ ಶಫಿ, ಉಪಾಧ್ಯಕ್ಷರಾಗಿ ಚೌಡೇಶ್ವರಿ ಬ್ಲಾಕ್‍ನ ವಿ.ಕೆ. ಮಂಜುನಾಥ್ ಹಾಗು ವಕ್ತಾರರನ್ನಾಗಿ ಆಲೆಕಟ್ಟೆ ರಸ್ತೆಯ ಎಚ್.ಕೆ. ಗಂಗಾಧರ್ ಅವರುಗಳನ್ನು ನೇಮಕ ಮಾಡಲಾಗಿದೆ  (ಕೆಸಿಐ,ಎಸ್.ಎಚ್)

Leave a Reply

comments

Related Articles

error: