ಮೈಸೂರು

ಹಿರಿಯ ಪತ್ರಕರ್ತ ಗಿರೀಶ್ ನಿಕ್ಕಂ ನಿಧನ

ಹಿರಿಯ ಪತ್ರಕರ್ತ ಮತ್ತು ರಾಜ್ಯ ಸಭಾ ಟೆಲಿವಿಷನ್  ನಿರೂಪಕರಾಗಿದ್ದ  ಗಿರೀಶ್ ನಿಕ್ಕಂ (59)ಸೋಮವಾರ ಸಂಜೆ ಹೃದಯಾಘಾತದಿಂದ ಇಹಲೋಕ ತ್ಯಜಿಸಿದ್ದಾರೆ.

ಮೈಸೂರು ಮೂಲದ ಗಿರೀಶ ನಿಕ್ಕಂ ಎಕ್ಸಪ್ರೆಸ್, ಇಂಡಿಯಾ ಟುಡೆ, ಡೆಕ್ಕನ್ನ ಕ್ರೋನಿಕಲ್, ನ್ಯೂಸ್ ಟೈಂ ಮತ್ತು ಟಿವಿ9 ಗಳಲ್ಲಿ ಕಾರ್ಯನಿರ್ವಹಿಸಿದ್ದರು. 19995ರಲ್ಲಿ ದೆಹಲಿಗೆ ತೆರಳಿದ ಗಿರೀಶ್ ಅಲ್ಲಿಯೂ ಕೆಲಕಾಲ ಫ್ರೀ ಲ್ಯಾನ್ಸರ್ ಆಗಿ ಕಾರ್ಯ ನಿರ್ವಹಿಸಿದ್ದರು. ಸದ್ಯ ರಾಜ್ಯ ಸಭಾ ಟೆಲಿವಿಷನ್ ನಲ್ಲಿ ನಿರೂಪಕರಾಗಿ ಕಾರ್ಯನಿರ್ವಹಿಸುತ್ತಿದ್ದರು.

ಅವರ ಪಾರ್ಥಿವ ಶರೀರವನ್ನು ಮಂಗಳವಾರ ಬೆಂಗಳೂರಿಗೆ ತರಲಾಗುತ್ತಿದ್ದು ಕನಕಪುರ ರಸ್ತೆಯಲ್ಲಿರುವ ಅವರ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ಇರಿಸಲಾಗುವುದು. ಬುಧವಾರ ಅಂತ್ಯಕ್ರಿಯೆ ನಡೆಯಲಿವೆ ಎಂದು ಬಲ್ಲ ಮೂಲಗಳು ತಿಳಿಸಿವೆ.

ಅವರ ನಿಧನಕ್ಕೆ ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವ ವೆಂಕಯ್ಯ ನಾಯ್ಡು ಸಂತಾಪ ಸೂಚಿಸಿದ್ದಾರೆ. ಗಿರೀಶ್ ನಿಕ್ಕಂ ಸಹೋದರ ಹಿರಿಯ ಪತ್ರಕರ್ತ ನಿರಂಜನ್ ನಿಕ್ಕಂ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

Leave a Reply

comments

Related Articles

error: