ಮೈಸೂರು

ಕನ್ನಡ ಸಮಸ್ಯೆಗಳ ಬಗ್ಗೆ ಚರ್ಚಿಸಲು ಕನ್ನಡ ಸಾಹಿತ್ಯ ಸಮ್ಮೇಳನಬೇಕು: ಚಂಪಾ

ಮೈಸೂರು,ಅ.21-ರಾಜ್ಯದಲ್ಲಿ ಕನ್ನಡದ ಸಮಸ್ಯೆಗಳ ಬಗ್ಗೆ ಚರ್ಚೆಮಾಡುವ ಸಲುವಾಗಿ ಕನ್ನಡ ಸಾಹಿತ್ಯ ಸಮ್ಮೇಳನಬೇಕು. ನಾನು ಸಾಹಿತ್ಯ ಸಮ್ಮೇಳನಗಳ ಪರ ಇದ್ದೇನೆ ಎಂದು ಹೇಳಿರುವ ಸಾಹಿತಿ ಹಾಗೂ 83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಪ್ರೊ.ಚಂದ್ರಶೇಖರ್ ಪಾಟೀಲ್ ದೇವನೂರ ಮಹದೇವ ಅವರಿಗೆ ತಿರುಗೇಟು ನೀಡಿದರು.

ದೇವನೂರ ಮಹದೇವು ಅವರು ಕನ್ನಡ ಕಡ್ಡಾಯವಾಗದವರೆಗೂ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಗೈರಾಗುತ್ತೇನೆ ಎಂದು ಹೇಳಿರುವ ವಿಚಾರವಾಗಿ ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅದು ಅವರ ವೈಯಕ್ತಿಕ ಅಭಿಪ್ರಾಯ. ಅವರ ವೈಯಕ್ತಿಕ ಅಭಿಪ್ರಾಯ ನಾನೂ ಗೌರವಿಸುತ್ತೇನೆ. ನಾವು ತತ್ವಬದ್ಧವಾಗಿ ಮಾತಾನಾಡುವವರು. ಕನ್ನಡಕ್ಕೆ ಸಮ್ಮೇಳನಗಳು ಬೇಕು ಅನ್ನೋನು ನಾನು. ಕನ್ನಡದ ಸಮಸ್ಯೆ ಏನೂ ಎಂಬುದನ್ನ ಒದರಿ ಹೇಳಲು ಸಮ್ಮೇಳನ ಬೇಕು. ನನ್ನ ವಿಚಾರ ಹೇಳಬೇಕಾದರೆ ಒಂದು ವೇದಿಕೆ ಬೇಕು. ಅದು ಯಾವುದೇ ವೇದಿಕೆ ಇರಲಿ, ಪಕ್ಷ ಇರಲಿ ಸಂಘಟನೆ ಇರಲಿ. ನಾನೂ ಅದನ್ನ ಸದುಪಯೋಗಪಡಿಸಿಕೊಳ್ಳುತ್ತೇನೆ ಎಂದರು.

ಟಿಪ್ಪು ಜಯಂತಿಗೆ ನನ್ನ ಹೆಸರು ಹಾಕಬೇಡಿ ಎಂಬುದು ಅನಂತಕುಮಾರ್ ಸಮಸ್ಯೆ. ಅದಕ್ಕೆ ನಾನೇನು ಉತ್ತರ ನೀಡಲು ಸಾಧ್ಯವಿಲ್ಲ. ನೀವು ಅನಂತಕುಮಾರ ಹೆಗ್ಡೆಯನ್ನೇ ಕೇಳಿ. ನಾವು-ನಮ್ಮಂತವರು ಪ್ರಜಾಪ್ರಭುತ್ವ ವಾದಿಗಳು. ಪ್ರಜಾಪ್ರಭುತ್ವದಲ್ಲಿ ನಮಗೆ ಅನಿಸಿದ್ದನ್ನ ಹೇಳುವ ಸ್ವಾತಂತ್ರ್ಯ ಇದೆ. ಒಬ್ಬರು ಹೇಳಿದ್ದನ್ನ ಕೇಳಬೇಕು. ಇಲ್ಲ ಅಂದರೆ ಲೆಟಸ್ ಅಗ್ರಿ ವಿತ್ ಡಿಸ್‌ಗ್ರಿ ಅನ್ನೋ ಮಾತಿದೆ. ಸಮಸ್ಯೆ ಬಗೆಹರಿಯದಿದ್ದರೆ ನಮ್ ನಮ್ ಮನೆಗೆ ಹೋಗ್ಬೇಕು ಎಂದು ಹೇಳಿದರು. (ವರದಿ-ಎಸ್.ಎನ್, ಎಂ.ಎನ್)

 

 

 

 

Leave a Reply

comments

Related Articles

error: