ಕರ್ನಾಟಕಪ್ರಮುಖ ಸುದ್ದಿ

ಮುಚ್ಚಿದ ಹಾಸನಾಂಬೆಯ ದೇಗುಲ : ಬಾಗಿಲು ಹಾಕುವ ಕಾರ್ಯಕ್ರಮಕ್ಕೆ ಮಾಧ್ಯಮಗಳಿಗೆ ನಿರ್ಬಂಧ

ರಾಜ್ಯ(ಹಾಸನ)ಅ.21:-  ಹಾಸನ ಡಿಸಿ ರೋಹಿಣಿ ಸಿಂಧೂರಿ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದ್ದಾರೆ. ಹಾಸನಾಂಬೆ ದೇವಾಲಯ ಬಾಗಿಲು ಹಾಕುವ ಕಾರ್ಯಕ್ರಮಕ್ಕೆ ಮಾಧ್ಯಮಗಳಿಗೆ ನಿರ್ಬಂಧ ವಿಧಿಸಿದ್ದಾರೆ.

ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಮಾಧ್ಯಮದವರನ್ನು  ಹೊರಗೆ ಕಳಿಸಿದ್ದಾರೆ. ಪ್ರತಿ ವರ್ಷ ಮಾಧ್ಯಮದವರಿಗೆ ಅವಕಾಶ ಇತ್ತು. ಆದರೆ  ತಮ್ಮ ಕುಟುಂಬ ಸದಸ್ಯರು, ಕೆಲ‌ ಪೊಲೀಸ್ ಅಧಿಕಾರಿಗಳಿಗೆ ಮಾತ್ರ ಒಳ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿತ್ತು, ಭಕ್ತರಿಗೂ ಅವಕಾಶ ನೀಡದ್ದಕ್ಕೆ ಆಕ್ರೋಶ ವ್ಯಕ್ತವಾಗಿದೆ. ಮಾಧ್ಯಮದವರನ್ನು ಬಳಕೆ ಮಾಡುಕೊಂಡು ಅಂತಿಮ ದಿನ ನಿರ್ಲಕ್ಷ್ಯ ಮಾಡಿದ ಜಿಲ್ಲಾಡಳಿತ ಎಂಬ ಮಾತುಗಳು ಕೇಳಿ ಬಂದಿವೆ. ಹಾಸನಾಂಬೆಯ ದೇಗುಲದ  ಬಾಗಿಲನ್ನು ಮಧ್ಯಾಹ್ನ 1.43 ಕ್ಕೆ ಮುಚ್ಚಲಾಗಿದೆ.  ಡಿಸಿ, ಎಸಿ ಸಮ್ಮುಖದಲ್ಲಿ ಹಾಸನಾಂಬೆ ಗರ್ಭಗುಡಿಗೆ ಬೀಗ ಹಾಕಲಾಗಿದ್ದು, ಭಕ್ತರು ದೇವಿ ಪರ ಜಯಘೋಷ ಮೊಳಗಿಸಿದರು. ಮುಂದಿನ‌ ವರ್ಷ ನವೆಂಬರ್ 1ರಿಂದ ರಿಂದ ೯ ರವರೆಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತಿದೆ. ಶನಿವಾರ  ಬಾರಿಯ  10 ದಿನಗಳ ಉತ್ಸವಕ್ಕೆ ವಿದ್ಯುಕ್ತ ತೆರೆ ಬಿದ್ದಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: