ಮೈಸೂರು

ಏಕೀಕರಣದ ನೆನಪು ತೆರೆದಿಟ್ಟ ಸುಗಮ ಸಂಗೀತ ಗಾಯನ

song-1-webಕರ್ನಾಟಕ ಏಕೀಕರಣದ ನೆನಪಿಗೋಸ್ಕರ ಮೈಸೂರಿನ ಕಲಾಮಂದಿರದಲ್ಲಿ  ಚಿತ್ರಗೀತೆ, ಸುಗಮ ಸಂಗೀತ ಗಾಯನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.

1956 ರ ಕರ್ನಾಟಕ ಏಕೀಕರಣದ ವಜ್ರಮಹೋತ್ಸವದ ಅಂಗವಾಗಿ ಜಿಲ್ಲಾಡಳಿತ, ವಾರ್ತಾ ಮತ್ತು ಸಾರ್ವಜನಿಕ ಇಲಾಖೆಗಳ ಸಹಯೋಗದಲ್ಲಿ  ಆಯೋಜಿಸಲಾಗಿದ್ದ ಈ ಕಾರ್ಯಕ್ರಮ ಪ್ರೇಕ್ಷಕರನ್ನು ರಂಜಿಸಿತು.

ಅಲ್ಲಿ ಕನ್ನಡ ಗೀತೆಗಳ ಸಮಾಗಮವಾಗಿತ್ತು. ನೀಮುಡಿದ ಮಲ್ಲಿಗೆ ಹೂವಿನ ಮಾಲೆ.. ನಿನಗೆಂದೇ ಬರೆದ ಪ್ರೇಮದ ಓಲೆ..ಕನ್ನಡ ಕುಲದೇವಿ, ಕಾಪಾಡು ಬಾ ತಾಯಿ ಸುಮಧುರ ಹಾಡುಗಳು ಪ್ರೇಕ್ಷಕರ ಮನಗೆದ್ದವು.

ಜಿ.ವಿ.ಅಯ್ಯರ್ ರಚಿತ ಕನ್ನಡದ ಕುಲದೇವಿ, ಸತ್ಯಂ ರಚಿತ ನೀ ಮುಡಿದ ಮಲ್ಲಿಗೆ ಹೂವಿನ ಮಾಲೆ ಸೇರಿದಂತೆ 60 ರಿಂದ 90 ದಶಕದ ಕನ್ನಡ ಚಿತ್ರಗೀತೆಗಳಿಗೆ ಗಾಯಕರಾದ ಸುನೀತಾ, ಮಂಗಳಾ ರವಿ, ಮೋಹನ್ ಹಾಗೂ ವಿನಯ್ ನಾಡಿಗ್ ದನಿಗೂಡಿಸಿದರು.

ಗಾಯಕಿ ಎಚ್.ಆರ್.ಲೀಲಾವತಿ, ಪಾಲಿಕೆ ಆಯುಕ್ತ ಜೆ.ಜಗದೀಶ್, ಪಾಲಿಕೆ ಸದಸ್ಯ ಕೆ.ವಿ.ಮಲ್ಲೇಶ್, ಪ್ರೊ.ಎಂ.ಕೃಷ್ಣೇಗೌಡ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಇದಕ್ಕೂ ಮೊದಲು ಅಖಂಡ ಕರ್ನಾಟಕ ಜ್ಞಾನಪೀಠಿಗಳ ಮಾಹಿತಿ, ಅಲ್ಲಲ್ಲಿನ ಸಂಸ್ಕೃತಿ, ಸಂಸ್ಕಾರಗಳ ಪ್ರತಿನಿಧಿಗಳನ್ನು ಹೊತ್ತ ಸ್ತಬ್ಧ ಚಿತ್ರದ ಮೆರವಣಿಗೆಯು ಅರಮನೆ ಕೋಟೆ ಆಂಜನೇಯಸ್ವಾಮಿ ದೇವಾಲಯದಿಂದ ಆರಂಭವಾಗಿ ನಗರದ ಪ್ರಮುಖ ರಸ್ತೆಗಳ ಮುಖೇನ ಸಾಗಿ ಕಲಾಮಂದಿರವನ್ನು ತಲುಪಿತು.

Leave a Reply

comments

Related Articles

error: