ಮೈಸೂರು

ರೇಷ್ಮೆ ಮಂಡಳಿಯ ಅಭಿವೃದ್ಧಿ ನನ್ನ ಗುರಿ: ಸೋಮಶೇಖರ್

ಸಿ‍ಲ್ಕ್ ಬೋರ್ಡ್ ದೇಶದಲ್ಲಿರುವ ಎಲ್ಲ ಮಂಡಳಿಗಿಂತ ಉತ್ತಮ ಸ್ಥಾನದಲ್ಲಿದೆ. ಸಿಲ್ಕ್ ಬೋರ್ಡ್‍ನ ಅಧ್ಯಕ್ಷನಾಗಿ ಆಯ್ಕೆಯಾಗಿರುವುದಕ್ಕೆ ನನಗೆ ಹೆಮ್ಮೆಯಿದೆ ಎಂದು ಶಾಸಕ ಎಂ.ಕೆ. ಸೋಮಶೇಖರ್ ಹೇಳಿದರು.

ಮೈಸೂರು ಕನ್ನಡ ವೇದಿಕೆಯಿಂದ ತಮ್ಮ ನಿವಾಸದಲ್ಲಿ ಸನ್ಮಾನ ಸ್ವೀಕರಿಸಿದ ಬಳಿಕ ಅವರು ಮಾತನಾಡಿದರು.

ಮೈಸೂರು ರೇಷ್ಮೆ ವಿಶ್ವದಲ್ಲೇ ಹೆಸರುವಾಸಿಯಾಗಿದೆ. ಕಾಂಚೀವರಂ ಮತ್ತು ಧರ್ಮಾವರಂನಷ್ಟೇ ಖ್ಯಾತಿಯನ್ನು ಪಡೆದಿದೆ. ರೈತರು ಹೆಚ್ಚು ರೇಷ್ಮೆ ಬೆಳೆ ಬೆಳೆಯಲು ಪ್ರೋತ್ಸಾಹ ನೀಡಬೇಕು. ಹಾಗಾದಾಗ ಮಾತ್ರ ಮಂಡಳಿ ಇನ್ನಷ್ಟು ಬಲವಾಗಿ ಹೆಚ್ಚು ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತವೆ ಎಂದರು.

ಮೈಸೂರು ಕನ್ನಡ ವೇದಿಕೆಯ ಎಸ್. ಬಾಲಕೃಷ್ಣ, ಲೇಖಕ ಬನ್ನೂರು ಕೆ. ರಾಜು, ಸಾಲುಂಡಿ ದೊರೆಸ್ವಾಮಿ, ರಾಧಾಕೃಷ್ಣ ಮತ್ತು ಇತರರು ಉಪಸ್ಥಿತರಿದ್ದರು.

Leave a Reply

comments

Related Articles

error: