ಪ್ರಮುಖ ಸುದ್ದಿಮೈಸೂರು

ಹುಣಸೂರಿನಲ್ಲಿ ದಳಪತಿಯಾಗಲು ವಿಶ್ವನಾಥ್ ಭರ್ಜರಿ ತಯಾರಿ : ಗೆಲುವಿಗಾಗಿ ಕಸರತ್ತು

ಮೈಸೂರು,ಅ.22:-  ಕಾಂಗ್ರೆಸ್ ಭದ್ರಕೋಟೆ ಹುಣಸೂರಲ್ಲಿ ದಳಪತಿಯಾಗಲು ವಿಶ್ವನಾಥ್ ಭರ್ಜರಿ ತಯಾರಿ ನಡೆಸಿದ್ದು,ಮಾಜಿ ಸಚಿವ ಹೆಚ್.ವಿಶ್ವನಾಥ್ ಅವರ ಚುನಾವಣಾ ಸಂಚಾರ ಬಿರುಸುಗೊಂಡಿದೆ.

ಹುಣಸೂರು ಕ್ಷೇತ್ರದಲ್ಲಿ ವಿಶ್ವನಾಥ್ ಮಿಂಚಿನ ಸಂಚಾರ ಆರಂಭವಾಗಿದ್ದು,  ಚುನಾವಣೆ ಹೊಸ್ತಿಲಲ್ಲಿ ಹುಣಸೂರು ಕ್ಷೇತ್ರದಲ್ಲಿ ವಿಶ್ವನಾಥ್ ರೌಂಡ್ಸ್ ನಡೆಸುತ್ತಿದ್ದಾರೆ. 2018 ನೇ ಸಾಲಿನ ವಿಧಾನಸಭಾ ಚುನಾವಣೆಯಲ್ಲಿ ಹುಣಸೂರು ಕ್ಷೇತ್ರಕ್ಕೆ ವಿಶ್ವನಾಥ್ ಅಭ್ಯರ್ಥಿ ಹಿನ್ನಲೆಯಲ್ಲಿ ಕ್ಷೇತ್ರದಲ್ಲಿ ಭರ್ಜರಿ ಸಂಚಾರ ಆರಂಭಿಸಿದ್ದಾರೆ.ಇಂದು ಹುಣಸೂರಿನ ಗಾವಡಗೆರೆ ಹೋಬಳಿ ಹಳ್ಳಿಗಳಲ್ಲಿ ಮತದಾರರ ಭೇಟಿ ಮಾಡಿ ಕಾಂಗ್ರೆಸ್ ಗೆ ತೊಡೆತಟ್ಟಿ ಜೆಡಿಎಸ್ ಸೇರಿರೋ ವಿಶ್ವನಾಥ್ ಗೆಲುವಿನ ಕಸರತ್ತು ನಡೆಸಿದ್ದಾರೆ. ಚುನಾವಣೆ ಘೋಷಣೆಗೂ ಮುನ್ನವೇ ಆರಂಭವಾಯಿತು ಹುಣಸೂರಲ್ಲಿ ಪ್ರಚಾರ ಪರ್ವ ಹಾಲಿ ಕಾಂಗ್ರೆಸ್ ಶಾಸಕ ಹೆಚ್.ಪಿ. ಮಂಜುನಾಥ್ ಮಣಿಸಲು ವಿಶ್ವನಾಥ್ ಪಣ ತೊಟ್ಟಿದ್ದಾರೆ. ಹುಣಸೂರಲ್ಲಿ ಮತದಾರನ  ಓಲೈಕೆಗೆ ಹೆಚ್.ವಿಶ್ವನಾಥ್ ಮುಂದಾಗಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: