ದೇಶ

ಶಬರಿಮಲೈ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶಕ್ಕೆ ಕಾಲ ಸನ್ನಿಹಿತ

ಶಬರಿಮಲೈ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶಕ್ಕೆ ಕಾಲ ಸನ್ನಿಹಿತವಾಗಿದೆ. ಈ ಸಂಬಂಧವಾಗಿ ಕೇರಳ  ಎಲ್ಡಿಎಫ್ ಸರ್ಕಾರ ದೇವಸ್ಥಾನಕ್ಕೆ ಎಲ್ಲಾ ವಯೋಮಾನದ ಮಹಿಳೆಯರ ಪ್ರವೇಶಕ್ಕೆ ಅನುಮತಿ ನೀಡಲು ನಿರ್ಧರಿಸಿದೆ.

10 ವರ್ಷದಿಂದ 50 ವರ್ಷದ ಹಿಳೆಯರಿಗೆ ದೇವಸ್ಥಾನ ಪ್ರವೇಶಕ್ಕೆ ಈ ಹಿಂದಿನ ಉಮನ್ ಚಾಂಡಿ ನೇತೃತ್ದ ಕಾಂಗ್ರೆಸ್ ಸರ್ಕಾರವೂ ನ್ಯಾಯಾಂಗ ಮೂಲಕ ಭಕ್ತರ ನಂಬಿಕೆಯನ್ನು ಬದಲಾಯಿಸಲು ಸಾಧ್ಯವಿಲ್ಲ, ದೇಗುಲದ ಸಂಪ್ರದಾಯ ಹಾಗೂ ಪದ್ಧತಿಯ ಭಾಗವಾಗಿದ್ದು ನಿರಂತರವಾಗಿ ಮುಂದುವರೆಯಬೇಕೆನ್ನುವುದು ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ಅಭಿಪ್ರಾಯವಾಗಿತ್ತು, ಈ ಹಿನ್ನೆಲೆಯಲ್ಲಿ ದೇವಸ್ಥಾನದ ಅರ್ಚಕರ ನಿರ್ಧಾರವೇ ಅಂತಿಮ ಎಂದು ಅಂದು ಆಳ್ವಿಕೆಯಲ್ಲಿದ್ದ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಭಿಪ್ರಾಯ ವ್ಯಕ್ತಪಡಿಸಿತ್ತು. ಆದರೆ ಪಿನರಾಯಿ ವಿಜಯನ್  ಸರ್ಕಾರ ಮಹಿಳೆಯರ ಪ್ರವೇಶಕ್ಕೆ ಒಪ್ಪಿಗೆ ನೀಡಿ ಸುಪ್ರೀಂ ಕೋರ್ಟ್ ಪ್ರಮಾಣಪತ್ರ ಸಲ್ಲಿಸಿದೆ ಕೋರ್ಟ್ ವಿಚಾರಣೆಯನ್ನು ಫೆ.17ಕ್ಕೆ ಮುಂದೂಡಿದೆ.

Leave a Reply

comments

Related Articles

error: