ಮೈಸೂರು

ನ. 9 : ಆಶ್ರಯ ಫಲಾನುಭವಿಗಳೊಂದಿಗೆ ರಾಮದಾಸ್ ಪಾದಯಾತ್ರೆ

ಕೃಷ್ಣರಾಜ ಕ್ಷೇತ್ರದ ಆಶ್ರಯ ಫಲಾನುಭವಿಗಳ ಹಕ್ಕಿಗಾಗಿ ಮಾಜಿ ಸಚಿವ ಎಸ್.ಎ.ರಾಮದಾಸ್ ನ.9 ರಂದು ಆಶ್ರಯ ಫಲಾನುಭವಿಗಳೊಡನೆ ಪಾದಯಾತ್ರೆಯನ್ನು ಹಮ್ಮಿಕೊಂಡಿದ್ದಾರೆ.

ಕಾನೂನುಬಾಹಿರವಾಗಿ ಫಲಾನುಭವಿಗಳ ನಿವೇಶನವನ್ನು ಹಿಂದಕ್ಕೆ ಪಡೆದುಕೊಂಡ ಹಾಗೂ ಬಹುಮಹಡಿ ಮನೆಗಳನ್ನು ಕಟ್ಟುವ ತೀರ್ಮಾನವನ್ನು ರದ್ದುಗೊಳಿಸಿ ಪ್ರತ್ಯೇಕ ಮನೆಗಳನ್ನು ನಿರ್ಮಿಸಿಕೊಡಬೇಕು. ಈ ಹಿಂದೆ ಚಾಮರಾಜ, ನರಸಿಂಹರಾಜ ಮತ್ತು ಚಾಮುಂಡೇಶ್ವರಿ ಕ್ಷೇತ್ರಗಳ ವ್ಯಾಪ್ತಿಯಲ್ಲಿ ವಾಸವಿದ್ದು, ಈಗ ಕೃಷ್ಣರಾಜ ಕ್ಷೇತ್ರದ ವ್ಯಾಪ್ತಿಗೆ ಒಳಪಟ್ಟಿರುವ ಆಶ್ರಯ ಫಲಾನುಭವಿಗಳಿಗೆ ಉಂಟಾಗಿರುವ ಗೊಂದಲವನ್ನು ನಿವಾರಿಸಿ  ಅವರಿಗೆ ಮನೆಗಳನ್ನು ನಿರ್ಮಿಸಿಕೊಡಬೇಕು ಎಂದು ಒತ್ತಾಯಿಸಿ ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ.

ರಮಾಬಾಯಿ ನಗರದ ಬಸ್ ನಿಲ್ದಾಣದಿಂದ ಪಾದಯಾತ್ರೆ ಹೊರಟು ಜೆ.ಪಿ.ನಗರ ಕೊನೆಯ ಬಸ್ ನಿಲ್ದಾಣದಿಂದ ಪೊಲೀಸ್ ಬೂತ್ ರಸ್ತೆ ಮೂಲಕ ಕವಿತ ಬೇಕರಿ ವೃತ್ತ, ಗೊಬ್ಬಳಿ ಮರ ವೃತ್ತ ತಲುಪಿ ಅಕ್ಕಮಹಾದೇವಿ ರಸ್ತೆಯ ಮೂಲಕ ಚಾಮುಂಡಿ ವನದ ಮುಂಭಾಗದಲ್ಲಿ ಬಲಕ್ಕೆ ತಿರುಗಿ ವಿದ್ಯಾರ‍ಣ್ಯಪುರಂ 2 ನೇ ಮುಖ್ಯರಸ್ತೆ ಮೂಲಕ ಚಾಮುಂಡಿಪುರಂ ವೃತ್ತ, ನಂಜುಮಳಿಗೆ ವೃತ್ತದಿಂದ ಮಧ್ವಾಚಾರ್ ರಸ್ತೆ ಮೂಲಕ 101 ಗಣಪತಿ ದೇವಸ್ಥಾನದ ವೃತ್ತ ತಲುಪಿ ತ್ಯಾಗರಾಜ ರಸ್ತೆ ಮೂಲಕ ನಗರ ಪಾಲಿಕೆ ಮುಂಭಾಗ ಧರಣಿ ನಡೆಸಲಿದ್ದಾರೆ.

Leave a Reply

comments

Related Articles

error: