ಮೈಸೂರು

ಕುರುಬರಹುಂಡಿ ಗ್ರಾಮದಲ್ಲಿ ಚಿರತೆಗಳು ಪ್ರತ್ಯಕ್ಷ : ಭಯದಲ್ಲಿ ಜನತೆ

ಮೈಸೂರು,ಅ.23:- ಟಿ ನರಸೀಪುರ  ತಾಲೂಕಿನ ಕುರುಬರಹುಂಡಿ ಗ್ರಾಮದಲ್ಲಿ ಚಿರತೆಗಳು ಪ್ರತ್ಯಕ್ಷವಾಗಿದ್ದು, ಚಿರತೆ ಕಂಡು ಗ್ರಾಮದ ನಿವಾಸಿಗಳು  ಭಯಭೀತರಾಗಿದ್ದಾರೆ.

ಸೋಮನಾಥಪುರ ಗ್ರಾಮ ಪಂಚಾಯತ್  ವ್ಯಾಪ್ತಿಯ ಕುರುಬರಹುಂಡಿ ಗ್ರಾಮದಲ್ಲಿ ಚಿರತೆ ಕಾಣಿಸಿಕೊಂಡಿದೆ ಎನ್ನಲಾಗಿದೆ. ಗ್ರಾಮಸ್ಥರು ಚಿರತೆಗಳ ಭಯದಿಂದ ಮನೆಯಿಂದ ಹೊರಬರದೇ ಪರಿತಪಿಸುವಂತಾಗಿದೆ. ಅರಣ್ಯ ಲಾಖಾ ಸಿಬ್ಬಂದಿಗಳು ಚಿರತೆ ಹೆಜ್ಜೆ ಗುರುತುಗಳನ್ನು ಗುರುತಿಸಿದ್ದು, ಚಿರತೆ ಬಂದಿರುವುದು ಪಕ್ಕಾ ಆಗಿದೆ. ಇದೀಗ  ಚಿರತೆ ಸೆರೆಗಾಗಿ ಬೋನ್ ಅಳವಡಿಸಿದ್ದಾರೆ. ಚಿರತೆ ಬೋನಿನಲ್ಲಿ ಬೀಳುವತನಕ ಗ್ರಾಮಸ್ಥರು ಭಯದಲ್ಲೇ ಇರುವ ಪರಿಸ್ಥಿತಿ ನಿರ್ಮಾಣಗೊಂಡಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: