ಕರ್ನಾಟಕ

ಹಾಸನಾಂಬ ದರ್ಶನಕ್ಕೆ ತೆರೆ

ಹಾಸನ (ಅ.23): ವರ್ಷಕ್ಕೊಮ್ಮೆ ದರ್ಶನ ನೀಡುವ ಹಾಸನದ ಆಧಿದೇವತೆ ಹಾಸನಾಂಬೆ ದೇವಿಗೆ ಧಾರ್ಮಿಕ ನಿಯಮಗಳಂತೆ ಪೂಜೆ ಸಲ್ಲಿಸಿ ಶನಿವಾರ ಮಧ್ಯಾಹ್ನ 1.39ಕ್ಕೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ದಾಸರಿ ಅವರ ಉಪಸ್ಥಿತಿಯಲ್ಲಿ ದೇವಾಲಯದ ಬಾಗಿಲನ್ನು ಮುಚ್ಚಲಾಯಿತ್ತು.

ಕಳೆದ 8 ದಿನಗಳಿಂದ ನಡೆಯುತ್ತಿದ್ದ ಹಾಸನಾಂಬ ಜಾತ್ರಾ ಮಹೋತ್ಸವದಲ್ಲಿ ಹಾಸನಾಂಬೆ ದರ್ಶನಕ್ಕೆ ದೇಶದ ವಿವಿಧ ಮೂಲೆಗಳಿಂದ ಜನಸಾಗರವೆ ಹರಿದು ಬಂದು ದರ್ಶನ ಪಡೆಯಿತ್ತು. ಅಪರ ಜಿಲ್ಲಾಧಿಕಾರಿ ಪೂರ್ಣಿಮ, ಉಪ ವಿಭಾಗಾಧಿಕಾರಿ ಡಾ:ಹೆಚ್.ಎಲ್.ನಾಗರಾಜು, ತಹಶಿಲ್ದಾರ್ ಶಿವಶಂಕರ್ ಮತ್ತಿತರರು ಹಾಜರಿದ್ದರು.

(ಎನ್‍ಬಿಎನ್‍)

Leave a Reply

comments

Related Articles

error: