ದೇಶ

ದೆಹಲಿಯ ವಾಯು ಮಾಲಿನ್ಯಕ್ಕೆ ಸ್ಥಳೀಯ ಸಂಗತಿಗಳೇ ಕಾರಣ

ಕಳೆದ ಹಲವಾರು ದಿನಗಳಿಂದ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಿತಿಮೀರಿದ ವಾಯುಮಾಲಿನ್ಯ ಉಂಟಾಗಿದ್ದು ಈ ಹಿನ್ನೆಲೆಯಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು.  ವಾಯು ಮಾಲಿನ್ಯಕ್ಕೆ ಪಂಜಾಬ್ ಮತ್ತು ಹರಿಯಾಣದ ರೈತರು ಭತ್ತದ ಬೆಳೆಯ ಅವಶೇಷ ಸುಡುತ್ತಿರುವುದೇ ಕಾರಣ ಎನ್ನುವ ದೆಹಲಿ ಸರ್ಕಾರದ ಆರೋಪವನ್ನು ಕೇಂದ್ರ ಪರಿಸರ ಸಚಿವ ಅನಿಲ ದಾವೆ ಸ್ಪಷ್ಟವಾಗಿ ಅಲ್ಲಗೆಳೆದಿದ್ದು ದೆಹಲಿಯಲ್ಲಿ ಮಿತಿಮೀರಿದ ವಾಹನ ದಟ್ಟಣೆ ಹಾಗೂ ಸ್ಥಳೀಯ ಸಂಗತಿಗಳೇ ಕಾರಣ ಎಂದು ತಿಳಿಸಿದ್ದಾರೆ.

ಅವರು, ಸೋಮವಾರ ದೆಹಲಿ ಹಾಗೂ ನೆರೆ ರಾಜ್ಯಗಳ ಪರಿಸರ ಸಚಿವರೊಂದಿಗೆ ಈ ಬಗ್ಗೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ದೆಹಲಿಯ ವಾಯುಮಾಲಿನ್ಯಕ್ಕೆ ಶೇ.80ರಷ್ಟು ಸ್ಥಳೀಯ ಸಂಗತಿಗಳೇ ಕಾರಣ, ಉಳಿದ ಶೇ.20ರಷ್ಟು ನೆರೆ ರಾಜ್ಯಗಳು ಕಾರಣವಿದೆ ಎಂದು ಸ್ಪಷ್ಟವಾಗಿ ತಿಳಿಸಿ ಒಕ್ಕೂಟ ವ್ಯವಸ್ಥೆ ಇತಿಮಿತಿಗಳನ್ನು ಅರ್ಥ ಮಾಡಿಕೊಂಡು ರಾಜ್ಯ ಸರ್ಕಾರಗಳು ವಾಯು ಮಾಲಿನ್ಯ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೆಕು ಎಂದು ತಿಳಿಸಿದರು.

Leave a Reply

comments

Related Articles

error: