ದೇಶಪ್ರಮುಖ ಸುದ್ದಿ

ಸಿಬಿಐ ಹೆಚ್ಚುವರಿ ನಿರ್ದೇಶಕರಾಗಿ ರಾಕೇಶ್ ಅಸ್ಥಾನಾ ನೇಮಕ

ನವದೆಹಲಿ,ಅ.23-ಕೇಂದ್ರೀಯ ತನಿಖಾ ಸಂಸ್ಥೆ (ಸಿಬಿಐ)ಗೆ ಹಿರಿಯ ಐಎಎಸ್ ಅಧಿಕಾರಿ ರಾಕೇಶ್ ಅಸ್ಥಾನಾ ಅವರನ್ನು ಹೆಚ್ಚುವರಿ ನಿರ್ದೇಶಕರಾಗಿ ಬಡ್ತಿ ನೀಡಿ ಸರ್ಕಾರ ಆದೇಶ ಹೊರಡಿಸಿದೆ.

ಮಹತ್ವದ ಪುನರ್ ರಚನೆಯಲ್ಲಿ, ವಿಚಕ್ಷಣಾ ದಳ (ಐಬಿ) ವಿಶೇಷ ನಿರ್ದೇಶಕರಾಗಿ ಗುರ್ಬಚನ್ ಸಿಂಗ್ ಮತ್ತು ಸಿಆರ್ಪಿಎಫ್ ವಿಶೇಷ ಮಹಾ ನಿರ್ದೇಶಕರಾಗಿ ಸುದೀಪ್ ಲಖಾತಿಯಾ ಅವರನ್ನು ನೇಮಿಸಲಾಗಿದೆ.

ರಾಜೇಶ್ ರಂಜನ್ ಹಾಗೂ .ಪಿ.ಮಹೇಶ್ವರಿ ಅವರಿಗೆ ಗಡಿ ಭದ್ರತಾ ಪಡೆಯ ವಿಶೇಷ ನಿರ್ದೇಶಕರಾಗಿ ಪದೋನ್ನತಿ ನೀಡಲಾಗಿದೆ. ನೂತನ ನೇಮಕವನ್ನು ಸಿಬ್ಬಂದಿ, ಸಾರ್ವಜನಿಕ ಅಹವಾಲು ಹಾಗೂ ಪಿಂಚಣಿ ಸಚಿವಾಲಯದ ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಘೋಷಿಸಿದೆ. (ವರದಿ-ಎಂ.ಎನ್)

Leave a Reply

comments

Related Articles

error: