ದೇಶ

ಶೀಘ್ರದಲ್ಲಿಯೇ ಬರಲಿದೆ 2 ಸಾವಿರ ರೂಪಾಯಿ ಮುಖಬೆಲೆ ನೋಟು..?!

ಭಾರತೀಯ ರಿಸರ್ವ್ ಬ್ಯಾಂಕ್ 2017ನೇ ಸಾಲಿನ ಜನವರಿ ಅಥವಾ ಫೆಬ್ರವರಿಯಲ್ಲಿ ಸಾರ್ವಜನಿಕ ಚಲಾವಣೆಗೆ ಎರಡು ಸಾವಿರ ರೂ ಮುಖಬೆಲೆಯ ನೋಟನ್ನು ಬಿಡುಗಡೆಗೊಳಿಸಲಿದೆ ಎಂಬ ಸುದ್ದಿ ಕೇಳಿಬಂದಿದೆ.

ಮೈಸೂರಿನಲ್ಲಿರುವ ಆರ್.ಬಿ.ಐನ ನೋಟು ಮುದ್ರಣ ಘಟಕದಲ್ಲಿ ಸಿದ್ಧವಾಗಿರುವ ಎರಡು ಸಾವಿರ ರೂಪಾಯಿ ನೋಟು ಸದ್ಯದ ಮಟ್ಟಿಗೆ ಭಾರತದ ಗರಿಷ್ಠ ಮೌಲ್ಯದ ನೋಟಾಗಿದೆ. ಈ ಬಗ್ಗೆ ಯಾವುದೇ ಮಾಹಿತಿಯನ್ನು ಕೇಂದ್ರ ಸರ್ಕಾರವಾಗಲಿ ಅಥವಾ ಅರ‍್.ಬಿ.ಐಯಾಗಲಿ ಅಧಿಕೃತವಾಗಿ ಬಹಿರಂಗಪಡಿಸಿಲ್ಲ.

ಪ್ರಮುಖ ಬ್ಯಾಂಕ್ ಗಳ ಕರೆನ್ಸಿ ಚೆಸ್ಟ್ ಗಳಿಗೆ ಎರಡು ಸಾವಿರ ರೂಪಾಯಿ ನೋಟುಗಳನ್ನು ಕಳುಹಿಸಿಕೊಟ್ಟಿರುವ ಆರ್.ಬಿ.ಐ ತನ್ನ ಮುಂದಿನ ಸೂಚನೆಯವರೆಗೆ ಸಾರ್ವಜನಿಕ ಚಲಾವಣೆಗೆ ನಿರ್ಬಂಧಿಸಿದೆ. ರಾಷ್ಟ್ರೀಕೃತ ಬ್ಯಾಂಕ್‍ಗಳು ನಗರದಲ್ಲಿ ಹೊಂದಿರುವ ಕರೆನ್ಸಿ ಚೆಸ್ಟ್‍‍ ಗಳಿಗೆ ಈ ನೋಟುಗಳು ರವಾನೆಯಾಗಿದ್ದು ಬಾಕ್ಸ್ ನಲ್ಲಿಟ್ಟು ಮೊಹರ್ ಮಾಡಲಾಗಿದೆ.

ಎರಡು ಸಾವಿರ ರೂಪಾಯಿ ಮುಖಬೆಲೆಯ ನೋಟು ಇತರ ನೋಟುಗಳಿಗಿಂತ ಭಿನ್ನವಾಗಿದ್ದು ಕಪ್ಪು ಹಣದ ಹಾವಳಿ ತಡೆಗಟ್ಟಲು ನ್ಯಾನೋ ಜಿಪಿಎಸ್ ಚಿಪ್ ಅಳವಡಿಸಲಾಗುತ್ತಿದೆ , ಇದರಲ್ಲಿ ನೋಟಿನ ಸೀರಿಯಲ್ ಸಂಖ್ಯೆ ನಮೂದಿಸಲಾಗಿದ್ದು ಚಿಪ್ ಗೆ ಉಪಗ್ರಹ ಸಂಪರ್ಕ ಇದ್ದು ನೋಟುಗಳು ಎಲ್ಲಿವೆ ಎಂಬುದನ್ನು ಸ್ಯಾಟಲೈಟ್ ಮೂಲಕ ಪತ್ತೆಹಚ್ಚಲು ಸಾಧ್ಯವಿದ್ದು ನೆಲಮಟ್ಟದಿಂದ 120 ಅಡಿ ಅಳದವರೆಗೆ ಅವುಗಳನ್ನು ಹೂತಿಟ್ಟರೂ ಜಿಪಿಎಸ್ ವ್ಯವಸ್ಥೆ ಮೂಲಕ ಅದರ ಮಾಹಿತಿ  ಸ್ಯಾಟಲೈಟ್ ಗೆ ಲಭ್ಯವಾಗುವ ಅಧುನಿಕ ರೀತಿಯಲ್ಲಿ ಸಿದ್ದಪರಿಸಲಾಗಿದೆ ಎನ್ನುವುದು ಮೂಲಗಳಿಂದ ತಿಳಿದು ಬಂದಿದೆ.

Leave a Reply

comments

Related Articles

error: