
ಕರ್ನಾಟಕಪ್ರಮುಖ ಸುದ್ದಿ
‘ಅಗ್ನಿಸಾಕ್ಷಿ’ ಬಿಟ್ಟು ಕಾರ್ಯಕ್ರಮ ನಿರೂಪಕನಾಗಲಿರುವ ‘ಸಿದ್ಧಾರ್ಥ್’?
ಬೆಂಗಳೂರು (ಅ.23): ‘ಅಗ್ನಿಸಾಕ್ಷಿ’ ಧಾರಾವಾಹಿಯಿಂದಾಗಿ ಪ್ರಸಿದ್ಧಿ ಪಡೆದಿರುವ ನಟ ಸಿದ್ಧಾರ್ಥ್ ಇನ್ನು ಕಾರ್ಯಕ್ರಮ ನಿರೂಪಕನಾಗಿ ಮಿಂಚಲಿದ್ದಾರಂತೆ.
ಕಲರ್ಸ್ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಅಗ್ನಿಸಾಕ್ಷಿ’ ಧಾರವಾಹಿಯ ನಾಯಕ ನಟ ಸಿದ್ಧಾರ್ಥ್ (ವಿಜಯ್ ಸೂರ್ಯ) ಎಂದರೆ ಹೆಣ್ಣು ಮಕ್ಕಳಿಗೆ ತುಂಬಾ ಇಷ್ಟ. ಆದರೆ ಕೆಲವು ದಿನಗಳಿಂದ ಅಗ್ನಿಸಾಕ್ಷಿ ಧಾರವಾಹಿಯಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಕಾರಣವೇನು ಎಂದಾಗ “ಕದ್ದು ಮುಚ್ಚಿ” ಎನ್ನುವ ಸಿನಿಮಾದ ಶೂಟಿಂಗ್ಗಾಗಿ ಧಾರವಾಹಿಯಿಂದ ಕೆಲವು ದಿನಗಳ ಮಟ್ಟಿಗೆ ಬ್ರೇಕ್ ತೆಗೆದುಕೊಂಡಿದ್ದಾರೆ ಎಂಬ ವಿಷಯ ಗೊತ್ತಾಗಿದೆ.
ಇದಲ್ಲದೆ ಮಜಾ ಟಾಕೀಸ್ ಬದಲಿಗೆ ವೀಕೆಂಡ್ಗಳಲ್ಲಿ ಪ್ರಸಾರವಾಗಲಿರುವ ಕಾಮಿಡಿ ಟಾಕೀಸ್ಗೆ ವಿಜಯ್ಸೂರ್ಯ ನಿರೂಪಕರಾಗಲಿದ್ದಾರಂತೆ. ನಟನ ಅವತಾರದಲ್ಲಿ ನೀವು ನೋಡಿದ್ದ ಗುಳಿ ಕೆನ್ನೆಯ ಹೀರೋ ಇನ್ನು ಮುಂದೆ ಹೊಸ ಅವತಾರದಲ್ಲಿ ಪ್ರತೀ ಶನಿವಾರ ಮತ್ತು ಭಾನುವಾರ ನಿಮಗೆ ರಂಜನೆ ನೀಡಲಿದ್ದಾರೆ. ಈ ಕಾಮಿಡಿ ಶೋಗೆ ಮಜಾ ಟಾಕೀಸ್ ಖ್ಯಾತಿಯ ಸೃಜನ್ ಲೋಕೇಶ್ ಮತ್ತು ನಟಿ ರಚಿತಾ ರಾಂ ತೀರ್ಪುಗಾರರು ಎನ್ನಲಾಗಿದೆ. ಈಗಾಗಲೇ ಈ ಕಾಮಿಡಿ ಶೋ ಶೂಟಿಂಗ್ ಆರಂಭವಾಗಿದೆ ಎಂದು ತಿಳಿದುಬಂದಿದೆ.
(ಎನ್ಬಿಎನ್)