ಮೈಸೂರು

ಎನ್‍.ಆರ್. ಸಮೂಹದಿಂದ ಸ್ವಚ್ಛ ಭಾರತ ಅಭಿಯಾನ

ಸಮಾಜಕ್ಕೆ ತಮ್ಮ ಕೈಯ್ಯಲ್ಲೇನಾದರೂ ಸೇವೆ ಮಾಡುವ ನಿಟ್ಟಿನಲ್ಲಿ ಸೈಕಲ್ ಪ್ಯೂರ್ ಅಗರಬತ್ತೀಸ್ ತಯಾರಕರಾದ ಎನ್‍.ಆರ್.ಸಮೂಹದ ಸುಮಾರು 150 ಮಂದಿ ಉದ್ಯೋಗಿಗಳು ಸ್ವಚ್ಛ ಭಾರತ ಅಭಿಯಾನದಲ್ಲಿ ಕೈಜೋಡಿಸಿದರು.

ಮೇಯರ್ ಬಿ.ಎಲ್. ಬೈರಪ್ಪ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಮೈಸೂರು ನಗರ ದೇಶದಲ್ಲಿಯೇ ಅತ್ಯಂತ ಸ್ವಚ್ಛ ನಗರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ನಗರವನ್ನು ಸ್ವಚ್ಛವಾಗಿಡುವುದು ನಮ್ಮೆಲ್ಲರ ಜವಾಬ್ದಾರಿ. ಸ್ವಚ್ಛತೆಯನ್ನು ಕಾಪಾಡುವುದು ಜೀವನದ ಒಂದು ಅವಿಭಾಜ್ಯ ಅಂಗವಾಗಬೇಕು. ಇದು ಕೇವಲ ಸರಕಾರ ಮತ್ತು ಸಂಸ್ಥೆಗಳ ಜಾವಾಬ್ದಾರಿ ಎಂದು ಭಾವಿಸಬಾರದು. ಎನ್‍.ಆರ್. ಸಮೂಹ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸ್ವಚ್ಛತಾ ಅಭಿಯಾನ ನಡೆಸಿರುವುದು ಖುಷಿ ತಂದಿದೆ ಎಂದರು.

ಎನ್‍.ಆರ್. ಸಮೂಹದ ಅಧ್ಯಕ್ಷ ಆರ್. ಗುರು ಮಾತನಾಡಿ, ನಮ್ಮದು ಪ್ರಗತಿಪರ ದೇಶ. ಸ್ವಚ್ಛ ಭಾರತ ಅಭಿಯಾನ ಇಡೀ ದೇಶಕ್ಕೆ ಒಂದು ಹೊಸ ಉದ್ದೇಶವನ್ನು ನೀಡಿದೆ. ಸ್ವಚ್ಛ ಭಾರತದ ಬಗ್ಗೆ ಅರಿವು ಮೂಡಿಸುವುದೇ ನಮ್ಮ ಮೂಲ ಉದ್ದೇಶವಾಗಿದೆ ಎಂದು ತಿಳಿಸಿದರು.

ಪಾಲಿಕೆ ಆಯುಕ್ತ ಜಗದೀಶ್, ಆರೋಗ್ಯಾಧಿಕಾರಿ ಡಾ.ಡಿ.ಜಿ. ನಾಗರಾಜ್ ಹಾಜರಿದ್ದರು. ಮಾನಂದವಾಡಿ ರಸ್ತೆಯ ಉದ್ದಗಲಕ್ಕೂ ಸ್ವಚ್ಛತಾ ಅಭಿಯಾನ ಕೈಗೊಂಡರು.

Leave a Reply

comments

Related Articles

error: