ಕರ್ನಾಟಕ

ಕಾಶೀ ಮಠಾಧೀಶರ “ಚಾತುರ್ಮಾಸ ದಿಗ್ವಿಜಯ”

ರಾಜ್ಯ(ಮಂಗಳೂರು)ಅ.23:-  ಕಾಶೀ ಮಠ ಸಂಸ್ಥಾನದ ಮಠಾಧೀಶ  ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರ “ಚಾತುರ್ಮಾಸ ದಿಗ್ವಿಜಯ” ವು    ಕೊಂಚಾಡಿ ಕ್ಷೇತ್ರದಲ್ಲಿ ಅತ್ಯಂತ ವಿಜೃಂಭಣೆಯಿಂದ ಹಾಗೂ ಸಹಸ್ರಾರು ಭಜಕರ ಉಪಸ್ಥಿತಿಯಲ್ಲಿ ನೆರವೇರಿತು .

ಪ್ರಾರಂಭದಲ್ಲಿ ಶ್ರೀಗಳವರು ಸಂಸ್ಥಾನದ ಆರಾಧ್ಯ ದೇವರ ದರ್ಶನ ಪಡೆದು ದಂಡಧಾರಿಗಳಾಗಿ ವೆಂಕಟರಮಣ ಹಾಗೂ ಮಹಾಲಸಾ ನಾರಾಯಣಿ ದೇವಿಯ ದರ್ಶನ ಪಡೆದು ದಿಗ್ವಿಜಯ ಮಹೋತ್ಸವಕ್ಕೆ ವಿಶೇಷವಾಗಿ ಅಲಂಕರಿಸಿದ ಭವ್ಯ ರಥದಲ್ಲಿ ವಿರಾಜಮಾನರಾದರು. ಬಳಿಕ ಜಿ . ಎಸ್ . ಬಿ . ಸಮಾಜದ ನೂರಾರು ಮಠ , ಮಂದಿರಗಳ ಆಡಳಿತ ಮಂಡಳಿ, ಮೊಕ್ತೇಸರರು ಶ್ರೀಗಳವರಿಗೆ ಹಾರಾರ್ಪಣೆ ಮಾಡಿದರು . ಕೊಂಚಾಡಿ ಪ್ರದೇಶಕ್ಕೆ ಆಗಮಿಸಿದ  ಮುಂಬೈ , ಕೇರಳ , ದೆಹಲಿ , ಕರ್ನಾಟಕದ ವಿವಿಧ ಭಾಗಗಳಿಂದ ಆಗಮಿಸಿದ  ಸಮಾಜ ಬಾಂಧವರಿಗೆ ಮಂತ್ರಾಕ್ಷತೆ ನೀಡಿ ಆಶೀರ್ವದಿಸಿದರು . ದಿಗ್ವಿಜಯ ಯಾತ್ರೆ ಸಾಗುವ ದಾರಿಯುದ್ದಕ್ಕೂ ವಿಶೇಷ ವಿದ್ಯುತ್ ದೀಪಾಲಂಕಾರ , ಸಮಾಜ ಭಾಂದವರ ಮನೆಯ ಮುಂಭಾಗದಲ್ಲಿ ತಳಿರು ತೋರಣಗಳೊಂದಿಗೆ ಅಲಂಕರಿಸಲಾಗಿತ್ತು .  ಸುಮಾರು 25 ಕ್ಕೂ ಅಧಿಕ ವಿಶೇಷ ವರ್ಣರಂಜಿತ ಟ್ಯಾಬ್ಲೊಗಳ,ಕೇರಳದ ವಿಶೇಷ ಚಂಡೆ ವಾದನ,ಪಂಚವಾದ್ಯಗಳು,ಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯ ವಿವಿಧ ಭಜನಾ ಮಂಡಳಿಗಳಿಂದ ಭಜನಾ ಸಂಕೀರ್ತನೆ, ಸ್ತಬ್ಧಚಿತ್ರಗಳು, ಜಿ . ಎಸ್ . ಬಿ ಯುವಕರು ಮತ್ತು ಪುಟಾಣಿಗಳ ಹುಲಿವೇಷ ವಿಶೇಷ ಜನಾಕರ್ಷಣೆ ಪಡೆಯಿತು.   ಶ್ರೀಗಳವರ ದಿಗ್ವಿಜಯ ಮಹೋತ್ಸವವು  ಕೊಂಚಾಡಿ ಶ್ರೀ ಕಾಶೀಮಠದಿಂದ ಸಾಯಂಕಾಲ 6.00 ಗಂಟೆಗೆ ಕೊಂಚಾಡಿ ದೇವಳದಿಂದ ಪ್ರಾರಂಭಗೊಂಡು, ಪದವಿನಂಗಡಿ, ಏರ್‍ಪೋರ್ಟ ರಸ್ತೆ ಮೂಲಕ ಹಾದು ಮೇರಿಹಿಲ್ ಮೂಲಕ ಶ್ರೀದೇವಳಕ್ಕೆ ಹಿಂತಿರುಗಿತು .(ಜಿ.ಕೆ,ಎಸ್.ಎಚ್)

Leave a Reply

comments

Related Articles

error: