ಲೈಫ್ & ಸ್ಟೈಲ್

ಚಳಿಗಾಲದಲ್ಲಿ ಇವುಗಳನ್ನು ಮರೆಯದೇ ಸೇವಿಸಿ

ಇಂದಿನ ದಿನಗಳಲ್ಲಿ ಆಹಾರದ ಕಡೆ ಗಮನ ನೀಡುವುದು ಅತ್ಯಗತ್ಯವಾಗಿದೆ. ಅದರಲ್ಲೂ ಚಳಿಗಾಲದ ಸಮಯದಲ್ಲಿ ವಿಶೇಷ ಕಾಳಜಿ ವಹಿಸಲೇ ಬೇಕು. ಅದಕ್ಕಾಗಿ ಈ ಕೆಳಗಿನ ತರಕಾರಿಗಳನ್ನು ನೀವು ಮರೆಯದೇ ಸೇವಿಸಲೇಬೇಕು.

spinach2-webಪಾಲಕ್ : ಪಾಲಕ್ ನಲ್ಲಿ ಧಾರಾಳವಾಗಿ ಕಬ್ಬಿಣದ ಅಂಶವಿರುತ್ತದೆ. ಪ್ರಕೃತಿದತ್ತವಾಗಿ ಸಿಗುವ ಈ ಕಬ್ಬಿಣದಂಶದಿಂದ ಶರೀರದಲ್ಲಿನ ರಕ್ತದ ಗುಣಮಟ್ಟ ಚೆನ್ನಾಗಿರುತ್ತದೆ. ಇದರಿಂದ ದೇಹದಲ್ಲಿ ಶಕ್ತಿ ಹೆಚ್ಚುತ್ತದೆ. ಅಷ್ಟೇ ಅಲ್ಲ ಇದರಲ್ಲಿ ವಿಟಾಮಿನ್ ಎ, ಸಿ ಮತ್ತು ಬಿ2 ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಇದರಲ್ಲಿರುವ ವಿಟಾಮಿನ್ ಮತ್ತು ಮಿನರಲ್ ಗಳು ಎಲುಬುಗಳನ್ನು ಬಲಿಷ್ಠವಾಗಿಸುತ್ತವೆ. ಪಾಲಕ್ ಸೇವನೆಯಿಂದ ಹಿಮೋಗ್ಲೋಬಿನ್ ಹೆಚ್ಚುತ್ತದೆ. ಅನಿಮಿಯಾದಿಂದ ಬಳಲುತ್ತಿರುವವರು ಪಾಲಕ್ ಸೇವಿಸುವುದರಿಂದ ಲಾಭವಿದೆ. ಮಕ್ಕಳು ಮತ್ತು ಹಾಲೂಡಿಸುವ ತಾಯಂದಿರಿಗೆ ಅತ್ಯಂತ ಉಪಯೋಗಕಾರಿಯಾಗಿದೆ. ಕಣ್ಣಿನ ದೃಷ್ಟಿಯೂ ಇದರಿಂದ ಶುಭ್ರಗೊಳ್ಳಲಿದೆ.

ಕ್ಯಾಬೀಜ್ : ಇದು ಎಲ್ಲ ಕಡೆಗಳಲ್ಲಿಯೂ ಸುಲಭದಲ್ಲಿ ಸಿಗುವ ತರಕಾರಿಯಾಗಿದ್ದು, ಇದರಲ್ಲಿ ವಿಟಾಮಿನ್ ಸಿ ಮತ್ತು ಕೆ ಹೇರಳವಾಗಿರುತ್ತದೆ. ಇದರಿಂದ ನಮ್ಮ ಆರೋಗ್ಯವನ್ನು ಸದೃಢವಾಗಿರಿಸುತ್ತದೆ. ಇದರಲ್ಲಿ ಪೈಬರ್, ಆ್ಯಂಟಿ ಆಕ್ಸಿಡೆಂಟ್ಸ್ ಆ್ಯಂಟಿಕಾರಸಿನೋಜೆನಿಕ್ ಕಂಪಾಂಡ್ಸ್ ಅಂಶವಿದ್ದು, ಆರೋಗ್ಯಕ್ಕೆ ಲಾಭದಾಯಕವಾಗಿದೆ. ಇದರಲ್ಲಿ ಕೊಲೆಸ್ಟ್ರಾಲ್ ನ್ನು ಕಡಿಮೆಗೊಳಿಸುವ, ಕ್ಯಾನ್ಸರ ನ್ನು ನಿಯಂತ್ರಿಸುವ, ಮಧುಮೇಹವನ್ನು ತಡೆಯುವ ಅಂಶಗಳಿವೆ. ಇದನ್ನು ಬೇಯಿಸಿ ಅಥವಾ ಹಸಿಯಾಗಿಯೇ ತಿನ್ನಬಹುದಾಗಿದೆ. ತಜ್ಞರ ಪ್ರಕಾರ ಇದನ್ನು ಹಸಿಯಾಗಿಯೇ ಸೇವಿಸಿದರೆ ಒಳ್ಳೆಯದು.sliced-cabbage-web

ಕ್ಯಾಪ್ಸಿಕಂ : ಇದರಲ್ಲಿ ಕ್ಯಾಲರಿ ವಿರಳವಾಗಿರುತ್ತದೆ. ಇದರಲ್ಲಿ ವಿಟಾಮಿನ್ ಎ, ಈ, ಬಿ ಮತ್ತು ಸಿ ಹೇರಳವಾಗಿರುತ್ತದೆ. ಇದು ಶರೀರದಲ್ಲಿನ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಈ ವಿಟಾಮಿನ್ ಗಳು ಕಣ್ಣು, ತ್ವಚೆ ಮತ್ತು ಹೃದಯಗಳಿಗೆ ಲಾಭದಾಯಕವಾಗಿದೆ. ತಜ್ಞರ ಪ್ರಕಾರ ಇದರ ಸೇವನೆಯಿಂದ ಶರೀರಕ್ಕೆ ಹೇರಳ ಪ್ರಮಾಣದಲ್ಲಿ ಪೋಷಕಾಂಶಗಳು ದೊರಕುತ್ತವೆ.capcicum-web

ಮೂಲಂಗಿ : ನೀವು ಮೂಲಂಗಿ ಸೇವಿಸುತ್ತಿಲ್ಲವೇ ? ಹಾಗಿದ್ದಲ್ಲಿ ಅದರಿಂದ ದೊರಕುವ ಲಾಭಗಳ ಕುರಿತು ತಿಳಿದರೆ ನಿಮಗೇ ಆಶ್ಚರ್ಯವಾಗಲಿದೆ. ಫಾಯಿಟೋಕೆಮಿಕಲ್ಸ್ ಅಂಶ ಇದರಲ್ಲಿದ್ದು ಕ್ಯಾನ್ಸರ್ ಬರದಂತೆ ತಡೆಯುತ್ತದೆ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ರಕ್ತದೊತ್ತಡವನ್ನು ನಿಯಂತ್ರಿಸಲು ಸಹಕಾರಿ. ಇದರಲ್ಲಿ ಸರಿಯಾದ ಪ್ರಮಾಣದಲ್ಲಿ ಪೊಟ್ಯಾಶಿಯಂ ಇದ್ದು ಶರೀರದಲ್ಲಿ ಸೋಡಿಯಂ-ಪೊಟ್ಯಾಶಿಯಂನ್ನು ಸಮ ಪ್ರಮಾಣದಲ್ಲಿರಿಸಿ ಬ್ಲಡ್ ಪ್ರೆಶರ್ ನ್ನು ಸಮತೋಲನದಲ್ಲಿರಿಸಲು ಸಹಾಯಕವಾಗಿದೆ. ಇದರಿಂದಾಗಿ ಮಧುಮೇಹಿಗಳು ಹೆಚ್ಚಾಗಿ ಸೇವಿಸುತ್ತಾರೆ. ಶೀತ ಮತ್ತು ಕೆಮ್ಮನ್ನು ನಿಯಂತ್ರಿಸುತ್ತದೆ. ಇದರಲ್ಲಿನ ಪೋಷಕ ಅಂಶಗಳು ಶರೀರದಲ್ಲಿರುವ ಬೇಡದ ಅಂಶಗಳನ್ನು ಹೊರಗೆ ತರಲು ಸಹಾಯಕವಾಗಿದೆ. ಇದು ದಂತ ಪಂಕ್ತಿಗಳನ್ನು ಮತ್ತು ಎಲುಬುಗಳನ್ನು ಬಲಿಷ್ಠವಾಗಿಸುತ್ತದೆ.health-2

ಬೀಟ್ ರೂಟ್: ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಬ್ಬಿಣ, ವಿಟಾಮಿನ್ ಮತ್ತು ಮಿನರಲ್ಸ್ ಗಳಿವೆ. ಇದು ಅಧಿಕ ರಕ್ತದೊತ್ತಡವನ್ನು ಕಡಿಮೆಗೊಳಿಸಲು ಸಹಾಯಕವಾಗಿದೆ. ರಕ್ತವನ್ನು ಶುದ್ಧೀಕರಿಸುತ್ತದೆ. ಶರೀರದಲ್ಲಿ ಹಿಮೋಗ್ಲೋಬಿನ್ ಪ್ರಮಾಣವನ್ನು ಹೆಚ್ಚಿಸುತ್ತದೆ. ಜ್ಯೂಸ್ ತಯಾರಿಸಿ ಕುಡಿದರಂತೂ ಇನ್ನೂ ಒಳ್ಳೆಯದು. ತಜ್ಞರ ಪ್ರಕಾರ ಹೃದಯ ಸಂಬಂಧಿ ಕಾಯಿಲೆಯುಳ್ಳವರಿಗೆ ಸಹಕಾರಿ. ಇದರಲ್ಲಿ ವಿಟಾಮಿನ್ ಬಿ-1, ಬಿ-2 ಅಧಿಕವಾಗಿದೆ. ಇದರಲ್ಲಿ ಅಡಕವಾಗಿರುವ ಸೋಡಿಯಂ, ಪೊಟ್ಯಾಶಿಯಂ, ಫಾಸ್ಪೋರಸ್, ಕ್ಯಾಲ್ಶಿಯಂ, ಸಲ್ಫರ್, ಕ್ಲೋರಿನ್, ಅಯೋಡಿನ್ ಆರೋಗ್ಯಕ್ಕೆ ಪೂರಕವಾಗಿದೆ. beetroot-webಮಾಂಸಖಂಡಗಳನ್ನು ಬಲಿಷ್ಠಗೊಳಿಸುತ್ತದೆ. ಪಚನಕ್ರಿಯೆಯನ್ನು ಸುಗಮಗೊಳಿಸುತ್ತದೆ.

guava-webಸೀಬೆ ಹಣ್ಣು : ಇದರಲ್ಲಿ ಫೈಬರ್ ಹೇರಳವಾಗಿದೆ. ಲ್ಯೂಟಿನ್, ಪೊಟ್ಯಾಶಿಯಂ, ಸಾಲ್ಯೂಬಲ್ ಡಾಇಟರಿ ಫೈಬರ್, ಕ್ಯಾಲ್ಶಿಯಂ, ಐರನ್ ಅಂಶಗಳಿವೆ. ನೀವು ಸ್ಲಿಮ್ ಆಗಲು ಬಯಸಿದ್ದಲ್ಲಿ ದಿನಕ್ಕೊಂದು ಸೀಬೆಹಣ್ಣು ತಿನ್ನಿ ಯಾಕೆಂದರೆ ಇದರಲ್ಲಿ ಕ್ಯಾಲರಿ ಕಡಿಮೆ ಪ್ರಮಾಣದಲ್ಲಿದೆ. ಪಚನಕ್ರಿಯೆಯೂ ಸರಾಗವಾಗಿರುತ್ತದೆ. ಇದರ ಬೀಜಗಳ ಸೇವನೆಯೂ ಆರೋಗ್ಯಕ್ಕೆ ಲಾಭದಾಯಕವಾಗಿದೆ. ಇದರಲ್ಲಿರುವ ಮ್ಯಾಗ್ನಿಶಿಯಂ ಮಾಂಸಖಂಡಗಳನ್ನು ಬಲಿಷ್ಠಗೊಳಿಸುತ್ತದೆ. ಇದರಿಂದ ನಿಶ್ಯಕ್ತಿ ಕಡಿಮೆಯಾಗುತ್ತದೆ. ಇದನ್ನು ಸೇವಿಸುವುದರಿಂದ ಕ್ಯಾನ್ಸರ್ ಕಣಗಳು ನಾಶವಾಗುತ್ತವೆ. ತ್ವಚೆಯ ಅಂದವನ್ನು ಹೆಚ್ಚಿಸುತ್ತದೆ. ಶರೀರದಲ್ಲಿ ಪೊಟ್ಯಾಶಿಯಂ ಮತ್ತು ಸೋಡಿಯಂ ಸಮಪ್ರಮಾಣದಲ್ಲಿರುತ್ತದೆ. ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸುವ ಗುಣವಿದೆ.

Leave a Reply

comments

Related Articles

error: