ದೇಶ

ಎನ್‍ಡಿಟಿವಿ ನಿರ್ಬಂಧಕ್ಕೆ ಕೇಂದ್ರದಿಂದ ತಡೆ

ಪ್ರಸಾರ ನಿಯಮ ಉಲ್ಲಂಘನೆ ಮಾಡಿದ ಆರೋಪದ ಮೇಲೆ ಹಿಂದಿ ಸುದ್ದಿವಾಹಿನಿ ಎನ್‍ಡಿಟಿವಿಗೆ ವಿಧಿಸಿದ್ದ 24 ಗಂಟೆ ಪ್ರಸಾರ ನಿಷೇಧ ಆದೇಶಕ್ಕೆ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಸೋಮವಾರ ತಡೆ ನೀಡಿದೆ.

ಎನ್‍ಡಿಟಿವಿ ಸಹ ಸಂಸ್ಥಾಪಕ ಪ್ರಣಯ್ ರಾಯ್ ಸೇರಿ ನಾಲ್ಕು ಮಂದಿ ಅಧಿಕಾರಿಗಳು ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಅವರನ್ನು ಭೇಟಿಯಾಗಿ ಸಭೆ ನಡೆಸಿತ್ತು. ಮಾಹಿತಿ ಮತ್ತು ಪ್ರಸಾರಾಂಗ ಇಲಾಖೆ ಕಾರ್ಯದರ್ಶಿ ಅಜಯ್ ಮಿತ್ತಲ್ ಮತ್ತು ಪ್ರೆಸ್ ಮಾಹಿತಿ ಬ್ಯೂರೋ ನಿರ್ದೇಶಕ ಜನರಲ್ ಫ್ರಾಂಕ್ ನೊರೋನ್ಹ ಅವರು ಕೂಡ ಸಭೆಯಲ್ಲಿ ಭಾಗಿಯಾಗಿದ್ದರು ಎನ್ನಲಾಗಿದೆ.

ನ.9ರಂದು ಮಧ್ಯರಾತ್ರಿ 12 ಗಂಟೆಯಿಂದ 10ರ ಮಧ್ಯರಾತ್ರಿ 12ರವರೆಗೆ ಪ್ರಸಾರ ನಿರ್ಬಂಧ ಹೇರಿ ಕಳೆದ ವಾರ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಆದೇಶ ಹೊರಡಿಸಿತ್ತು. ಇದಕ್ಕೆ ದೇಶಾದ್ಯಂತ ಭಾರಿ ವಿರೋಧ ವ್ಯಕ್ತವಾಗಿತ್ತು. ಕೇಂದ್ರದ ಆದೇಶ ಪ್ರಶ್ನಿಸಿ ಸೋಮವಾರ ಎನ್‍ಡಿಟಿವಿ ಸುಪ್ರೀಂ ಮೆಟ್ಟಿಲೇರಿತ್ತು. ಅರ್ಜಿ ಸ್ವೀಕರಿಸಿದ ನ್ಯಾಯಾಲಯ, ಮಂಗಳವಾರ ವಿಚಾರಣೆ ನಿಗದಿಪಡಿಸಿತ್ತು. ಈಗ ಸರ್ಕಾರ ಕೂಡ ನಿರ್ಬಂಧವನ್ನು ತಡೆಹಿಡಿದಿದೆ

Leave a Reply

comments

Related Articles

error: