ಕರ್ನಾಟಕಪ್ರಮುಖ ಸುದ್ದಿ

ಇಂದಿರಾ ಕ್ಯಾಂಟಿನ್ ಆಹಾರಕ್ಕೆ ಜಿರಳೆ ಹಾಕಿ ವಿಡಿಯೋ ಮಾಡಿದ್ದ ಇಬ್ಬರ ಬಂಧನ

ಬೆಂಗಳೂರು,ಅ.23-ಇಂದಿರಾ ಕ್ಯಾಂಟೀನ್ ಉಪಾಹಾರದಲ್ಲಿ ಜಿರಳೆ ಸಿಕ್ಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಹೇಮಂತ್, ದೇವರಾಜ್ ಬಂಧಿತ ಆರೋಪಿಗಳು. ಬಂಧಿತರು ಆಟೋ ಚಾಲಕರಾಗಿದ್ದು ಪ್ರಚಾರಕ್ಕೆ ಆಹಾರದಲ್ಲಿ ಜಿರಳೆ ಹಾಕಿದ್ದಾಗಿ ತನಿಖೆಯಲ್ಲಿ ಬಾಯ್ಬಿಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಅ.20ರಂದು ಹೇಮಂತ್ ಮತ್ತು ದೇವರಾಜ್ ನಾಗರಬಾವಿ ಮಾಲಗಾಳದ ಇಂದಿರಾ ಕ್ಯಾಂಟಿನಿನಲ್ಲಿ ಉಪಹಾರ ತೆಗೆದುಕೊಂಡು ಅದಕ್ಕೆ ಜಿರಳೆ ಹಾಕಿ ಅದನ್ನು ವಿಡಿಯೋ ಮಾಡಿದ್ದರು. ವಿಡಿಯೋದಲ್ಲಿ ಅಲ್ಲಿನ ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು. ಈ ಬಗ್ಗೆ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. (ವರದಿ-ಎಂ.ಎನ್)

 

 

 

Leave a Reply

comments

Related Articles

error: