ಕರ್ನಾಟಕ

ನ್ಯಾಯಕ್ಕಾಗಿ ರೈತರೋರ್ವರ ಅಹೋರಾತ್ರಿ ಧರಣಿ

ರಾಜ್ಯ(ಮಂಡ್ಯ)ಅ.24:- ನ್ಯಾಯಕ್ಕಾಗಿ ರೈತರೋರ್ವರು ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕು ಕಚೇರಿ ಎದುರು ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ.

ದರಸಗುಪ್ಪೆ ಗ್ರಾಮದ ರೈತ ಪ್ರಭಾಕರ್‌ ಎಂಬವರೇ  ಏಕಾಂಗಿ ಯಾಗಿ ಧರಣಿ ನಡೆಸುತ್ತಿದ್ದಾರೆ. ನಾಲಾರಸ್ತೆ ಒತ್ತುವರಿ ತೆರವು, ನಾಲೆ ಅಭಿವೃದ್ಧಿಗೆ ಒತ್ತಾಯಿಸುತ್ತಿದ್ದು,2004ರಿಂದ ನಿರಂತರವಾಗಿ ಮನವಿ ಸಲ್ಲಿಸುತ್ತಿದ್ದಾರೆ.ರೈತನ ಮನವಿಗೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಈ ಹಿನ್ನೆಲೆಯಲ್ಲಿ ನ್ಯಾಯ ಕೊಡಿ, ಇಲ್ಲವೇ ದಯಾಮರಣಕ್ಕೆ ಅನುಮತಿ ಕೊಡಿ ಎಂದು ರೈತ ಪ್ರತಿಭಟನೆ ನಡೆಸುತ್ತಿದ್ದಾರೆ. ನಿನ್ನೆಯಿಂದ ಪ್ರತಿಭಟನೆ ಕುಳಿತಿದ್ದಾರೆ. ಪ್ರತಿಭಟನಾ ಸ್ಥಳದಲ್ಲಿಯೇ ಊಟ ಮಾಡಿ ಮಲಗಿದ್ದಾರೆ ಎಂದು ತಿಳಿದು ಬಂದಿದೆ.  (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: