ಸುದ್ದಿ ಸಂಕ್ಷಿಪ್ತ

ಕಥಾ ಸ್ಪರ್ಧೆಗೆ ಕಥೆಗಳ ಆಹ್ವಾನ

ಸೋಮವಾರಪೇಟೆ,ಅ.24-ತಥಾಸ್ತು ಸಾತ್ವಿಕ ಸಂಸ್ಥೆ ವತಿಯಿಂದ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಸಾರ್ವಜನಿಕರಿಗೆ ತಥಾಸ್ತು ಕಥಾ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ ಎಂದು ಸಂಸ್ಥೆಯ ಸಂಚಾಲಕಿ ಶೋಭಾ ಶಿವರಾಜ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

`ನನ್ನವರು’ ಎಂಬ ವಿಷಯದ ಬಗ್ಗೆ ಸ್ಪರ್ಧಿಗಳು ತಮ್ಮ ಸ್ವಂತ ಕೈ ಬರಹದಲ್ಲಿ, ಬಿಳಿ ಹಾಳೆಯ ಒಂದು ಮಗ್ಗಲಿನಲ್ಲಿ ಮಾತ್ರ ಸ್ಫುಟವಾಗಿ ಕಥೆಯನ್ನು ಬರೆದಿರಬೇಕು. ಯಾವುದೇ ಆಂಗ್ಲ ಪದವನ್ನು ಬಳಸಬಾರದು. ಯಾವುದೇ ಮಾಧ್ಯಮಗಳಲ್ಲಿ ಪ್ರಕಟಿತವಾಗಿರಬಾರದು. ಕಥೆಗಳನ್ನು ಖುದ್ದಾಗಿ ಅಥವಾ ಅಂಚೆಯ ಮೂಲಕ ಎಕ್ಸ್ ನಂ-179/1, ಮಹದೇಶ್ವರ ಬಡಾವಣೆ, ಸೋಮವಾರಪೇಟೆ, ಇಲ್ಲಿಗೆ ನವೆಂಬರ್ 30ರೊಳಗೆ ತಲುಪಿಸುವಂತೆ ತಲುಪಿಸಬೇಕಿದೆ. ನಂತರ ಬಂದ ಕಥೆಗಳನ್ನು ಪರಿಗಣಿಸಲಾಗುವುದಿಲ್ಲ.

ಉತ್ತಮ ಬರಹಗಳಿಗೆ ಮೂರು ಬಹುಮಾನಗಳನ್ನು ನೀಡಲಾಗುವುದು. ಹೆಚ್ಚಿನ ಮಹಿತಿಗಾಗಿ 9481431764 ಸಂಪರ್ಕಿಸಬಹುದು. (ವರದಿ-ಕೆಸಿಐ, ಎಂ.ಎನ್)

Leave a Reply

comments

Related Articles

error: