ಮೈಸೂರು

ಮಧುರ ಗೀತೆಗಳ ಸುಧೆ ಹರಿಸಿದ ರಸಸಂಜೆ

ಮೈಸೂರಿನ ಜಗನ್ಮೋಹನ ಅರಮನೆಯಲ್ಲಿ ಮಧುರಗಾನ ಕಲಾವೃಂದದ ವತಿಯಿಂದ ಡಾ.ರಾಜ್ ಕುಮಾರ್-ಜಿ.ಕೆ.ವೆಂಕಟೇಶ್ ಎರಡು ನಕ್ಷತ್ರಗಳ ರಸಸಂಜೆ ಕಾರ್ಯಕ್ರಮ ಜರುಗಿತು.

ಕಾರ್ಯಕ್ರಮವನ್ನು ಹಿರಿಯ ಚಲನಚಿತ್ರ ನಿರ್ದೇಶಕ ಎಸ್.ಕೆ.ಭಗವಾನ್ ದೀಪ ಬೆಳಗುವ ಮೂಲಕ ಉದ್ಘಾಟಿಸಿ ಶುಭ ಹಾರೈಸಿದರು.  ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾನಿಲಯದ ಕುಲಪತಿ ಡಾ.ಸರ್ವಮಂಗಳಾ ಶಂಕರ್ ಮಾತನಾಡಿ  ಚಲನಚಿತ್ರನಟ ಡಾ.ರಾಜ್ ಕುಮಾರ್ ಮತ್ತು ಸಾಹಿತ್ಯ ರಚನೆಕಾರ ಜಿ.ಕೆ.ವೆಂಕಟೇಶ್ ಅವರು ಕನ್ನಡ ನಾಡಿನ ಅದ್ಭುತ ಪ್ರತಿಭೆಗಳು. ಅವರ ಕುರಿತು ಸಂಶೋಧನೆಗಳನ್ನೇ ಮಾಡಬಹುದು ಎಂದರು.

ವೆಂಗೀಪುರ ನಂಬಿಮಠದ ಬಿ.ವಿ.ಇಳೈ ಆಳ್ವಾರ್ ಸ್ವಾಮೀಜಿ, , ಸಮಾಜ ಸೇವಕ ಕೆ.ರಘುರಾಂ, ನಗರ ಕಾಂಗ್ರೆಸ್ ಅಧ್ಯಕ್ಷ ಟಿ.ಎಸ್.ರವಿಶಂಕರ್, ಗಾಯಕ ರಮೇಶ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

ಸಭಾ ಕಾರ್ಯಕ್ರಮದ ಬಳಿಕ ನಡೆದ ರಸಸಂಜೆ ಕಾರ್ಯಕ್ರಮದಲ್ಲಿ ಗಾಯಕರ ಸುಶ್ರಾವ್ಯ ಕಂಠದಿಂದ ಮಧುರಗೀತೆಗಳ ಸುಧೆ ಹರಿದಿತ್ತು.

Leave a Reply

comments

Related Articles

error: