ಮೈಸೂರು

ಎಸ್‍ಜೆಸಿಇ ಮತ್ತು ಅಟೋಮೋಟಿವ್ ಆ್ಯಕ್ಸೆಲ್ಸ್ ಮಧ್ಯೆ ಒಪ್ಪಂದ

ಮೈಸೂರು ಮೂಲದ ಅಟೋಮೋಟಿವ್‍ ಆ್ಯಕ್ಸೆಲ್‍ ಜೊತೆ ಶ್ರೀ ಜಯಚಾಮರಾಜೇಂದ್ರ ಇಂಜಿನಿಯರಿಂಗ್ ಕಾಳೇಜು ಒಡಂಬಡಿಕೆಗೆ ಸಹಿ ಹಾಕಿತು. ಈ ಒಪ್ಪಂದದಿಂದ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ತರಬೇತಿ ಲಭಿಸುವುದಲ್ಲದೆ, ಅಟೋಮೋಟಿವ್ ಆ್ಯಕ್ಸೆಲ್‍ನ ಉದ್ಯೋಗಿಗಳಿಗೆ 3 ವರ್ಷಗಳ ಅರೆಕಾಲಿಕ ಎಂಬಿಎ ಕೋರ್ಸ್ ನಡೆಸಲು ಅವಕಾಶ ಸಿಗಲಿದೆ.

ಜೆಎಸ್‍ಎಸ್‍ ವಿಜ್ಞಾನ ಮತ್ತು ತಂತ್ರಜ್ಞಾನ ವಿದ್ಯಾಲಯದ ಉಪ ಕುಲಪತಿ ಬಿ.ಜಿ. ಸೋಮಶೇಖರ್ ಅವರು ಮಾತನಾಡಿ, ದೇಶಾದ್ಯಂತ ಅನೇಕ ವಿದ್ಯಾರ್ಥಿಗಳು, ಮೆಕ್ಯಾನಿಕಲ್, ಇಂಡಸ್ಟ್ರಿಯಲ್ ಪ್ರೊಡಕ್ಷನ್, ಸಿವಿಲ್ ಇಂಜಿನಿಯರಿಂಗ್ ಮತ್ತು ಇತರ ವಿಷಯಗಳಲ್ಲಿ ಅಧ್ಯಯನ ನಡೆಸಿ, ಕೊನೆಗೆ ತಮ್ಮ ನಾಲ್ಕು ವರ್ಷಗಳ ಶಿಕ್ಷಣವನ್ನು ವ್ಯರ್ಥ ಮಾಡಿ ಐಟಿ ಜಾಬ್‍ಗೆ ಸೇರುತ್ತಾರೆ. ಈ ಪ್ರಕ್ರಿಯೆಯನ್ನು ಬದಲಾಯಿಸುವ ನಿಟ್ಟಿನಲ್ಲಿ ಈ ಒಪ್ಪಂದಕ್ಕೆ ಸಹಿ ಹಾಕಲಾಗಿದ್ದು, ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಜ್ಞಾನ ನೀಡುವ ಮೂಲಕ ಅವರ ಕೌಶಲಗಳನ್ನು ಅಭಿವೃದ್ಧಿಪಡಿಸಲಾಗುವುದು. ಮತ್ತು ಉದ್ಯೋಗಿಗಳಿಗೆ ಉನ್ನತ ಶಿಕ್ಷಣ ಪಡೆಯಲು ಅವಕಾಶವನ್ನು ಒದಗಿಸಿದೆ. ಮೈಸೂರಿನಲ್ಲಿ ಮೊದಲ ಬಾರಿಗೆ ಈ ರೀತಿಯ ಯೋಜನೆ ರೂಪಿಸಲಾಗಿದೆ. ಮುಂಬರುವ ದಿನಗಳಲ್ಲಿ ಇತರ ಕೈಗಾರಿಕೆ ಕಂಪೆನಿಗಳೊಂದಿಗೆ ಕೈಜೋಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಅಟೋಮೋಟಿವ್ ಆ್ಯಕ್ಸೆಲ್ಸ್‍ನ ಅಧ್ಯಕ್ಷ ಮತ್ತು ನಿರ್ದೇಶಕರಾದ ಎನ್‍. ಮುತ್ತುಕುಮಾರ್, ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಭರತ್ ಫೋರ್ಜ್, ಜೆಎಸ್‍ಎಸ್‍ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ನಿರ್ದೇಶಕ ಸಿ.ಜಿ. ಬೆಸ್ತೂರ್‍ಮಠ್ ಮತ್ತು ಇತರರು ಉಪಸ್ಥಿತರಿದ್ದರು.

Leave a Reply

comments

Related Articles

error: