ಮೈಸೂರು

ಆಯುಷ್‍ನಲ್ಲಿ ಶ್ರವಣ ಸಾಧನ ದುರಸ್ತಿ ಶಿಬಿರ ಆರಂಭ

ಆಯುಷ್‍ನ ಎಲೆಕ್ಟ್ರಾನಿಕ್ಸ್ ವಿಭಾಗದಿಂದ ಐದು ದಿನಗಳ ‘ಶ್ರವಣ ಸಾಧನಗಳ ಉಚಿತ ದುರಸ್ತಿ’ ಶಿಬಿರವನ್ನು ಆರಂಭಿಸಿದ್ದು, ಶಾಸಕ ವಾಸು ಚಾಲನೆ ನೀಡಿದರು. ಆಯುಷ್‍ ಸಂಸ್ಥೆಯು ಮೈಸೂರಿನ ಜನರಿಗೆ ನೀಡುತ್ತಿರುವ ಸೇವೆಗಳ ಬಗ್ಗೆ ಶ್ಲಾಘಿಸಿದ ವಾಸು, ಬಡವರಿಗೆ ಈ ಶಿಬಿರವು ಅತ್ಯಂತ ಉಪಯೋಗವಾಗಿದ್ದು, ಶ್ರವಣ ಸಾಧನ ಬಳಸುವ ಮೈಸೂರಿಗರು ಮತ್ತು ಹೊರಗಿನವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಶಿಬಿರದ ಪ್ರಯೋಜನ ಪಡೆಯುವಂತೆ ಕೇಳಿಕೊಂಡರು.

ಅಧ್ಯಕ್ಷತೆ ವಹಿಸಿದ್ದ ಎನ್‍.ಆರ್. ಸಮೂಹದ ಅಧ್ಯಕ್ಷ ಆರ್. ಗುರು ಮಾತನಾಡಿ, ಮೈಸೂರು ಮತ್ತು ಇತರ ಪ್ರದೇಶಗಳ ಜನರ ಶ್ರವಣ ಸಮಸ್ಯೆ ನಿವಾರಿಸಲು ಆಯುಷ್ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದೆ. ಆಯುಷ್ ಸಿಬ್ಬಂದಿ ವರ್ಗವು ಜನರಿಗೆ ಉತ್ತಮ ಸೇವೆಗಳನ್ನು ಒದಗಿಸುತ್ತಿದೆ, ಭವಿಷತ್‍ನಲ್ಲಿಯೂ ಈ ರೀತಿಯ ಕಾರ್ಯಗಳನ್ನು ಮುಂದುವರಿಸಲಿ ಎಂದು ಆಶಿಸಿದರು.

ಆಯುಷ್ ನಿರ್ದೇಶಕಿ ಡಾ.ಎಸ್‍.ಆರ್. ಸಾವಿತ್ರಿ ಮಾತನಾಡಿ, ಶ್ರವಣ ಸಮಸ್ಯೆ ಹೊಂದಿರುವವರಿಗೆ ಸಾಧನವನ್ನು ವಿತರಿಸುವುದು ನಮ್ಮ ಸಂಸ್ಥೆಯ ಪ್ರಮುಖ ಕಾರ್ಯ. ಶ್ರವಣ ಸಾಧನ ಹೊಂದಿರುವ ಯಾರಾದರೂ ಬಂದು ಶಿಬಿರದಲ್ಲಿ ತಮ್ಮ ಸಾಧನವನ್ನು ದುರಸ್ತಿ ಮಾಡಿಸಿಕೊಳ್ಳಬಹುದು ಎಂದರು.

ಎಲೆಕ್ಟ್ರಾನಿಕ್ಸ್ ವಿಭಾಗದ ಮುಖ್ಯಸ್ಥ ಪ್ರೊ. ಅಜೀಶ್ ಕೆ. ಅಬ್ರಾಹಾಂ ಮತ್ತು ಕಾರ್ಯಕ್ರಮ ಸಂಯೋಜಕರಾದ ಎನ್. ಮನೋಹರ್ ಉಪಸ್ಥಿತರಿದ್ದರು.

Leave a Reply

comments

Related Articles

error: