ಮೈಸೂರು

ಪೌಲೋ ಟ್ರಾವೆಲ್ಸ್ ನಿಂದ ಮೈಸೂರು – ಗೋವಾ \ ಕೊಯಮತ್ತೂರಿಗೆ ನೇರ ಬಸ್

ಸಾರಿಗೆ ಸಂಚಾರಿ ವ್ಯವಸ್ಥೆಯಲ್ಲಿ ಅದ್ವಿತೀಯ ಯಶಸ್ವಿ ಹಾಗೂ ಖ್ಯಾತಿಯನ್ನು ಗಳಿಸಿರುವ ಪೌಲೋ ಟ್ರಾವೆಲ್ಸ್ ಮೈಸೂರಿನ ಪ್ರಯಾಣಿಕರಿಗೊಂದು ಸಿಹಿ ಸುದ್ದಿಯನ್ನು ನೀಡಿದೆ. ಮೈಸೂರಿನಿಂದ ಕೊಯಮತ್ತೂರು ಮತ್ತು ಗೋವಾಗೆ ನೇರ ಸುಸಜ್ಜಿತ ಎಸಿ ಸ್ಲೀಪರ್ ಬಸ್ ಅನ್ನು ಆರಂಭಿಸಿದೆ ಎಂದು ಟ್ರಾವೆಲ್ಸ್ ನ ಮಾಲೀಕ ಮಾರಿಯೋ ಎಸ್ ಪೆರೇರೊ ತಿಳಿಸಿದರು.

img_4138-lಅವರು, ಮಂಗಳವಾರ ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಈಗಾಗಲೇ ಆರಂಭವಾಗಿರುವ ಬಸ್ ಸಂಚಾರಕ್ಕೆ ವಾರಾಂತ್ಯದಲ್ಲಿ ಉತ್ತಮ ಪ್ರತಿಕ್ರಿಯೆ ನಿರೀಕ್ಷಿಸಲಾಗಿದೆ. ನಮ್ಮ ತಾತನವರು 1930 ರಿಂದಲೂ ಕಂಪನಿಯು ಸಾರಿಗೆ ಸಂಪರ್ಕದಲ್ಲಿ ಪ್ರಯಾಣಿಕರಿಗೆ ಉತ್ತಮ ಸೇವೆಯನ್ನು ನೀಡುತ್ತಿದ್ದು, ಪೌಲೋ ಟ್ರಾವೆಲ್ಸ್ ಮತ್ತೊಂದು ಹೊಸ ಹೆಜ್ಜೆಯನ್ನಿರಿಸಿದ್ದು ಮೈಸೂರಿನಿಂದ ಕೊಯಮತ್ತೂರಿಗೆ ಬೆಳಿಗ್ಗೆ 6:30 ಗಂಟೆಗೆ ಎಸಿ ಸ್ಲೀಪರ್ ಬಸ್ ಹೊರಡಲಿದೆ. ಅದರಂತೆ ಮೈಸೂರಿನಿಂದ ಹೊರಟು ಬೆಂಗಳೂರು, ಚಿತ್ರದುರ್ಗ, ದಾವಣಗೆರೆ ಹಾಗೂ ಹುಬ್ಬಳ್ಳಿಯ ಮೂಲಕ ಗೋವಾ ತಲುಪಲಿದ್ದು ಇದನ್ನು ಸಂಜೆ 6:30ಕ್ಕೆ ನಗರದಿಂದ ಹೊರಟು ಬೆಳಿಗ್ಗೆ 9 ಗಂಟೆಗೆ ಗೋವಾ ತಲುಪಲಿದೆ. ಇದಲ್ಲದೆ ಗೋವಾದಿಂದ ಹೈದ್ರಾಬಾದ್, ಪೂನಾ, ಮುಂಬೈ, ನಾಸಿಕ್ ಸೇರಿದಂತೆ ದೇಶದಾದ್ಯಂತ ಹಲವಾರು ನಗರಗಳಿಗೆ ಕಂಪನಿಯ ಬಸ್ ಗಳು ಸೇವೆ ನೀಡುತ್ತಿವೆ. ಮೈಸೂರಿನಿಂದ ಗೋವಾಕ್ಕೆ ಹಾಗೂ ಕೊಯಮತ್ತೂರಿಗೆ ಹೊರಡುವ ಬಸ್ ಗೆ ಮುಂಗಡ ಟಿಕೆಟ್ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು, ವಿಶೇಷ ರಿಯಾಯಿತಿ ನೀಡಲಾಗುವುದು. ಪ್ರಯಾಣದ ದರವೂ ಮಿತವಾಗಿದೆ.  ಅಲ್ಲದೇ, ಊಟಿ, ಕೊಯಮತ್ತೂರು, ಮೈಸೂರು ಮತ್ತು ಬೆಂಗಳೂರಿಗೆ ಪ್ಯಾಕೇಜ್ ಟೂರ್ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು. ಹೆಚ್ಚಿನ ಮಾಹಿತಿಗಾಗಿ ಪೌಲೋ ಟ್ರಾವೆಲ್ಸ್, #36 ಮಹಾರಾಜ ಕಾಂಪ್ಲೆಕ್ಸ್, ಸಬರ್ಬ್ ಬಸ್ ನಿಲ್ದಾಣದ ಎದುರು, ಮೈಸೂರು, ಹೆಚ್ಚಿನ ಮಾಹಿತಿಗಾಗಿ ಪೋನ್ ನಂ: 94452 75332 ಹಾಗೂ 0821 2442323 ಅನ್ನು ಸಂಪರ್ಕಿಸಬಹುದು.

ಸುದ್ದಿಗೋಷ್ಠಿಯಲ್ಲಿ ಬಾಂಬೆ ವಿಭಾಗದ ಮೆನೇಜರ್ ಧರ್ಮೇಶ್, ಮೈಸೂರು ವಿಭಾಗದ ಮಹ್ಮದ್ ಹಾಗೂ ಇತರರು ಉಪಸ್ಥಿತರಿದ್ದರು.

Leave a Reply

comments

Related Articles

error: