
ಪ್ರಮುಖ ಸುದ್ದಿವಿದೇಶ
ರೌದ್ರ ರೂಪ ತಾಳಿದ ಚಂಡಮಾರುತಕ್ಕೆ ನಾಲ್ವರ ಬಲಿ
ಟೋಕಿಯೋ,ಅ.24: ಜಪಾನಲ್ಲಿ ಅಬ್ಬರಿಸಿ ಚಂಡಮಾರುತ ಲ್ಯಾನ್ ರೌದ್ರ ರೂಪಕ್ಕೆ ನಾಲ್ವರು ಬಲಿಯಾಗಿದ್ದಾರೆ.
ಗಂಟೆಗೆ 198 ಕಿಲೋ ಮೀಟರ್ ವೇಗದಲ್ಲಿ ಅಪ್ಪಳಿಸಿರುವ ಲ್ಯಾನ್ ದ್ವೀಪ ರಾಷ್ಟ್ರದಲ್ಲಿ ಸಾಕಷ್ಟು ಅನಾಹುತಗಳನ್ನು ಸೃಷ್ಟಿಸಿದೆ. ಪ್ರವಾಹದಲ್ಲಿ ಮಹಿಳೆಯೊಬ್ಬರು ಕೊಚ್ಚಿಕೊಂಡು ಹೋಗಿದ್ದಾರೆ. ಸೇತುವೆಗಳು ಮುರಿದು ಬಿದ್ದಿದ್ದು ವಾಹನಗಳು ಕೊಚ್ಚಿಕೊಂಡು ಹೋಗಿವೆ. ಬಿರುಗಾಳಿ ಸಹಿತ ಭಾರಿ ಮಳೆಯಾಗುತ್ತಿದೆ. ರಾಜಧಾನಿ ಟೋಕಿಯೋ ಸೇರಿದಂತೆ ರಸ್ತೆ, ರೈಲು, ವಿಮಾನ ಸಂಪರ್ಕ ಅಸ್ತವ್ಯಸ್ಥಗೊಂಡಿದೆ. ರಸ್ತೆಗಳಲ್ಲಿ ಪ್ರವಾಹ ಉಂಟಾಗಿದ್ದು ಹೆದ್ದಾರಿಗಳು ಕುಸಿದಿವೆ.
ವರದಿಯ ಪ್ರಕಾರ ರಾತ್ರಿಯೆಲ್ಲಾ ಪ್ರಯಾಣಿಕರು ರೈಲಿನಲ್ಲಿ ಸಿಲುಕಿಕೊಂಡಿದ್ದು, ಸೋಮವಾರದ ಮಾರ್ನಿಂಗ್ ಎಕ್ಸ್ ಪ್ರೆಸ್ ರೈಲು ಹಾಗೂ ಫೆರೀ ಸರ್ವಿಸ್ ರೈಲುಗಳನ್ನು ರದ್ದುಗೊಳಿಸಲಾಗಿತ್ತು. ಭೂ ಕುಸಿತದಿಂದ ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದು, ಹಲವು ಗಾಯಗಳಿಂದ ಇಬ್ಬರು ಕೋಮಾಗೆ ಜಾರಿದ್ದಾರೆ. 90 ಜನರಿಗೆ ಸಣ್ಣಪುಟ್ಟ ಗಾಯವಾಗಿದೆ ಎಂದು ಜಪಾನ್ ಮಾಧ್ಯಮ ವರದಿ ಮಾಡಿದೆ. ( ವರದಿ: ಪಿ. ಎಸ್ )