ಸುದ್ದಿ ಸಂಕ್ಷಿಪ್ತ

ಅ.26 ರಿಂದ 28 ರವರೆಗೆ 6ನೇ ವರ್ಷದ `ಕೊಡವ ನಮ್ಮೆ’

ಮಡಿಕೇರಿ,ಅ.24-ಕೊಡವ ಸಮಾಜಗಳ ಒಕ್ಕೂಟದ ವತಿಯಿಂದ 6ನೇ ವರ್ಷದ `ಕೊಡವ ನಮ್ಮೆ’ ಅ.26 ರಿಂದ 28 ರವರೆಗೆ ಬಾಳುಗೋಡುವಿನಲ್ಲಿ ನಡೆಯಲಿದೆ.

ಅ.26 ರಂದು ಕೊಡವ ಸಮಾಜಗಳ ಒಕ್ಕೂಟದ ಪೊಮ್ಮಕಡ ಕೂಟದ `ಪೊಮ್ಮಕ್ಕಡ ನಮ್ಮೆ’, ಕೊಡವ ಮಕ್ಕಡ ಕೂಟದ ವತಿಯಿಂದ `ಕೊಡವರು ಹಾಗೂ ಕಾವೇರಿ’ ಪುಸ್ತಕ ಬಿಡುಗಡೆ, ಅ.27 ರಂದು ಹುತಾತ್ಮರಿಗೆ ನಮನ, ಕ್ರೀಡಾಕೂಟ ಉದ್ಘಾಟನೆ ಹಾಗೂ ಅ.28 ರಂದು ಸಾಂಸ್ಕೃತಿಕ ಕಾರ್ಯಕ್ರಮಗಳ ಸ್ಪರ್ಧೆ ಮತ್ತು ಸಮಾರೋಪ ಕಾರ್ಯಕ್ರಮ ನಡೆಯಲಿದೆ.

ಈ ಕಾರ್ಯಕ್ರಮದಲ್ಲಿ ಹಲವು ಮಂದಿ ಪ್ರಮುಖರು, ಕ್ರೀಡಾಪಟುಗಳು, ಗಣ್ಯರು ಆಗಮಿಸಲಿದ್ದಾರೆ. ತಾವು ಎಲ್ಲರೂ ಆಗಮಿಸಿ ಸಹಕಾರ ನೀಡಬೇಕಾಗಿ ಹಾಗೂ ಹೆಚ್ಚಿನ ಮಾಹಿತಿಗೆ ಮೊ.ನಂ. 9880778047 ಸಂಪರ್ಕಿಸಬಹುದು ಎಂದು ಬೊಳ್ಳಜಿರ ಬಿ.ಅಯ್ಯಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. (ವರದಿ-ಕೆಸಿಐ, ಎಂ.ಎನ್)

Leave a Reply

comments

Related Articles

error: