ಮೈಸೂರು

ಬಿಜೆಪಿಯಲ್ಲಿ ಭಿನ್ನಮತ : ನಾಯಕರಿಂದ ಮನವೊಲಿಕೆ ಯತ್ನ

ಮೈಸೂರು,ಅ.24:- ಬಿಜೆಪಿಯಲ್ಲಿ ಭಿನ್ನಮತ ಹಿನ್ನಲೆಯಲ್ಲಿ ಭಿನ್ನಮತ ಶಮನಮಾಡಲು ಬಿಜೆಪಿ ನಾಯಕರು ಮುಂದಾಗಿದ್ದಾರೆ.

ಮಾಜಿ ಸಚಿವ ಸಿ.ಎಚ್.ವಿಜಯಶಂಕರ್ ರಾಜ್ಯ ಬಿಜೆಪಿ ನಾಯಕರ ವಿರುದ್ಧ ಅಸಮಧಾನಗೊಂಡಿದ್ದು, ಅವರ ಮನವೊಲಿಸಲು ಇಂದು ಸಂಜೆ ಸಂಸದೆ ಶೋಭಾ ಕರಂದ್ಲಾಜೆ ಮೈಸೂರಿಗೆ ಆಗಮಿಸಲಿದ್ದಾರೆ. ಮಾಜಿ ಸಂಸದ ಸಿ ಹೆಚ್ ವಿಜಯಶಂಕರ್ ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ ಎನ್ನಲಾಗಿದೆ. ಬಿಜೆಪಿ ತೊರೆದು ಕಾಂಗ್ರೆಸ್ ಸೇರಲು ವಿಜಯ ಶಂಕರ್ ನಿರ್ಧರಿಸಿದ್ದು ಅವರ ಮನವೊಲಿಕೆಗೆ ಬಿಜೆಪಿ ನಾಯಕರಿಂದ ಯತ್ನ ನಡೆಯಲಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: