ಪ್ರಮುಖ ಸುದ್ದಿಮೈಸೂರು

ಖಾಸಗೀಕರಣ ವಿರೋಧಿಸಿ ಬಿ.ಇ.ಎಂ.ಎಲ್ ಸಂಸ್ಥೆಯ ಕಾರ್ಮಿಕರಿಂದ ಪ್ರತಿಭಟನೆ ನ.9ರಂದು

ದೇಶದ ಪ್ರತಿಷ್ಠಿತ ಬಿ.ಇ.ಎಂ.ಎಲ್ ಸಂಸ್ಥೆಯನ್ನು ಖಾಸಗೀಕರಣಗೊಳಿಸಿ ಪ್ರಭಾವಿಗಳಿಗೆ ಮಣೆ ಹಾಕುತ್ತಿದ್ದು ಕೇಂದ್ರ ಸರ್ಕಾರದ ಈ ಕ್ರಮಕ್ಕೆ ಕಾರ್ಮಿಕ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿ ಪ್ರತಿಭಟನೆಗೆ ಸಜ್ಜಾಗಿವೆ ಎಂದು  ಬಿ.ಇ.ಎಂ.ಎಲ್ ಎಂಪ್ಲಾಯೀಸ್ ಅಸೋಸಿಯೇಷನ್ ಅಧ್ಯಕ್ಷ ಎನ್.ಕೆ.ದೇವದಾಸ್ ದೂರಿದರು.

srm_imageಅವರು, ಈ ಬಗ್ಗೆ ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಖಾಸಗೀಕರಣವನ್ನು ಖಂಡಿಸಿ ನ.9ರ ಬುಧವಾರ ಮಧ್ಯಾಹ್ನ 3:30ಕ್ಕೆ ಮೈಸೂರು ಅರಮನೆ ಮುಂಭಾಗದಲ್ಲಿ  ಕಂಪನಿಯ ಕಾರ್ಮಿಕ ಸಂಘ, ಅಧಿಕಾರಿಗಳ ಒಕ್ಕೂಟ ಮತ್ತು ಗುತ್ತಿಗೆ ಕಾರ್ಮಿಕರ ಮಾನವ ಸರಪಳಿ ನಡೆಸಿ ಪ್ರತಿಭಟಿಸಲಾಗುವುದು. ನ.19ರಂದು ಬೆಂಗಳೂರಿನಲ್ಲಿ ಸಮಾವೇಶ ನಡೆಸಿಲಾಗುವುದು. ಅಲ್ಲದೇ, ಡಿ.10ರಂದು ಬೆಂಗಳೂರಿನ ಕೇಂದ್ರ ರೈಲ್ವೆ ನಿಲ್ದಾಣದಿಂದ ಫ್ರೀಡಂ ಪಾರ್ಕ್ ವರೆಗೂ ರ್ಯಾಲಿ ನಡೆಸಿ ಕೇಂದ್ರ ರಕ್ಷಣಾ ಸಚಿವರಿಗೂ ಹಾಗೂ ಪ್ರಧಾನಿ ನರೇಂದ್ರ ಮೋದಿಯವರಿಗೆ ಮನವಿ ಪತ್ರ ಸಲ್ಲಿಸಲಾಗುವುದು ಎಂದು ತಿಳಿಸಿದರು.

ಸಾಧನೆ : ಸಂಸ್ಥೆಯು ರಕ್ಷಣಾಕ್ಷೇತ್ರಕ್ಕೆ ವೆಪನ್ ಲೋಡರ್, ಏರ್ ಕ್ರಾಫ್ಟ್ ಟೋಯಿಗ್ ಟ್ಯಾಂಕರ್, ರಕ್ಷಣೆ ಮತ್ತು ಗೌಪ್ಯತೆಯನ್ನು ಕಾಪಾಡುವ ಯಂತ್ರಗಳನ್ನು, ಏರೋಸ್ಪೇಸ್ ಬೇಕಾಗುವ ಉಪಕರಣವಲ್ಲದೆ ಅತ್ಯಂತ ಶೇಷ್ಠ ತಂತ್ರಜ್ಞಾನ ಹೊಂದಿರುವ ಆಕಾಶ್ ಹಾಗೂ ಅಗ್ನಿ ಮಿಸೈಲ್ ಬಿಡಿ ಭಾಗಗಳನ್ನು ಹಾಗೂ ಮೆಟ್ರೋ ರೈಲುಗಳನ್ನು ತಯಾರಿಸುವ ದೇಶದ ಏಕೈಕ ಸಂಸ್ಥೆಯಾಗಿದ್ದು ಕಳೆದ 50 ವರ್ಷಗಳಿಂದಲೂ ಲಾಭದಲ್ಲಿಯೇ ಇದೇ. ಇಂತಹ ಸಂಸ್ಥೆಯನ್ನು ಕೇಂದ್ರ ಸರ್ಕಾರ ಖಾಸಗೀಕರಣ ಮಾಡುವುದರಿಂದ ಕಾರ್ಮಿಕ ಹಕ್ಕುಗಳ ದಮನವಾಗುವುದು. ನೌಕರರು ಪಡೆಯುತ್ತಿರುವ ಸೌಲಭ್ಯಗಳು ಕುಂಠಿತವಾಗುವುದು ಅಲ್ಲದೇ ವಿಶೇಷ ಚೇತನರಿಗೆ ಮೀಸಲಾತಿ ಇಲ್ಲದೇ ವಂಚಿಸಿದಂತಾಗುವುದು. ಸಂಸ್ಥೆ ರಾಜ್ಯದಲ್ಲಿ ಮೂರು ಕಡೆ ಕಾರ್ಯನಿರ್ವಹಿಸುತ್ತಿದೆ. ಸಾವಿರಾರು ಕಾರ್ಮಿಕರು ಸೇವೆ ಸಲ್ಲಿಸುತ್ತಿದ್ದು ಖಾಸಗೀಕರಣದಿಂದ ನೌಕರರ ಸ್ಥಿತಿ ಅತಂತ್ರವಾಗುವುದು. ಕಪ್ಪು ಹಣ ತರುತ್ತೇವೆಂದು ಹೇಳುತ್ತಿದ್ದ ಕೇಂದ್ರ ಸರ್ಕಾರ ಇಂದು ಸಾರ್ವಜನಿಕ ಹಣಕ್ಕೆ ಕೈಹಾಕುತ್ತಿದೆ. ಕಂಪನಿಗೆ ಕೋಟ್ಯಾಂತರ ರೂಪಾಯಿ ಮೌಲ್ಯದ ಆಸ್ತಿ ಇದ್ದು ಖಾಸಗಿಯವರು ಅದನ್ನು ದುರುಪಯೋಗಪಡಿಸಿಕೊಳ್ಳುವುದರಲ್ಲಿ ಸಂಶಯವಿಲ್ಲ ಎಂದು ಕಿಡಿಕಾರಿದರು.

ಸುದ್ದಿಗೋಷ್ಠಿಯಲ್ಲಿ ಕಾರ್ಯದರ್ಶಿ ಗೋವಿಂದ ರೆಡ್ಡಿ, ಸಹಕಾರ್ಯದರ್ಶಿ ಶಿವಪ್ಪ, ಖಜಾಂಚಿ ಜಾನ್ ಸಿಂಗ್, ಎಸ್.ಸಿ ಎಸ್ಟಿ ವೆಲ್ ಫೇರ್ ನ ನಾರಾಯಣ್ ಹಾಗೂ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.

Leave a Reply

comments

Related Articles

error: