ಮೈಸೂರು

ಪಿಎಸಿಎಲ್ ಕಂಪನಿ ಗ್ರಾಹಕರಿಗೆ, ಏಜೆಂಟುದಾರರಿಗೆ ಹಣ ಹಿಂತಿರುಗಿಸುವಂತೆ ಒತ್ತಾಯಿಸಿ ಮೌನ ಪ್ರತಿಭಟನೆ

ಮೈಸೂರು,ಅ.25:- ಪಿಎಸಿಎಲ್ ಕಂಪನಿಯು ಗ್ರಾಹಕರಿಗೆ ಮತ್ತು ಏಜೆಂಟುದಾರರಿಗೆ ಹಣ ಹಿಂತಿರುಗಿಸದ ಹಿನ್ನೆಲೆಯಲ್ಲಿ ಕೂಡಲೇ ಗ್ರಾಹಕರಿಗೆ ಮತ್ತು ಏಜೆಂಟುದಾರರಿಗೆ ಹಣ ಹಿಂತಿರುಗಿಸುವಂತೆ ಒತ್ತಾಯಿಸಿ ಮೌನ ಪ್ರತಿಭಟನೆ ನಡೆಯಿತು.

ಪರ್ಲ್ಸ್ ನ  ಏಜೆಂಟರುಗಳ ಮತ್ತು ಹೂಡಿಕೆದಾರರ ಹಿತರಕ್ಷಣಾ ಸಮಿತಿ ವತಿಯಿಂದ  ನಡೆದ ಪ್ರತಿಭಟನೆಗೆ ನಗರದ ಕೋಟೆ ಆಂಜನೇಯಸ್ವಾಮಿ ದೇವಾಲಯದ ಬಳಿ ಚಾಲನೆ ನೀಡಲಾಯಿತು. ಬಳಿಕ ಜಿಲ್ಲಾಧಿಕಾರಿಗಳ ಕಚೇರಿಯ ವರೆಗೆ ಮೌನ ಪ್ರತಿಭಟನಾ ಮೆರವಣಿಗೆ ನಡೆಯಿತು. ಮೆರವಣಿಗೆಯಲ್ಲಿ ನ್ಯಾಯಬೇಕು ನ್ಯಾಯಬೇಕು ಪಿ.ಎ.ಸಿ.ಎಲ್ ಗ್ರಾಹಕರಿಗೆ ಮತ್ತು ಕಾರ್ಯಕರ್ತರಿಗೆ ನ್ಯಾಯಬೇಕು, ಸುಪ್ರೀಂಕೋರ್ಟ್ ನ ನಿವೃತ್ತ ಮುಖ್ಯ ನ್ಯಾಯಾಧೀಶರಾದ ಆರ್.ಎಂ ಲೋಧಾ ಸಮಿತಿಯಿಂದ ಪಿ.ಎ.ಸಿ.ಎಲ್ ಗ್ರಾಹಕರಿಗೆ ಹೂಡಿಕೆ ಹಣ ಹಿಂದಿರುಗಿಸುವ ಬಗ್ಗೆ ದಿನಾಂಕ ಘೋಷಣೆ ಮಾಡಲೇಬೇಕು ಎಂಬ ನಾಮಫಲಕಗಳನ್ನು ಹಿಡಿದು ಸಾಗಿದರು. ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಕಾಲ್ನಡಿಗೆಯಲ್ಲಿ ತೆರಳಿ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಮಂಡ್ಯ, ಚಾಮರಾಜನಗರ ಮುಂತಾದ ಜಿಲ್ಲೆಗಳ ಗ್ರಾಹಕರು ಮತ್ತು ಏಜೆಂಟರುಗಳು ಪಾಲ್ಗೊಂಡಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: