ಮೈಸೂರು

ಎನ್‍ಎಸ್‍ಎಸ್‍ ಮಹಾತ್ಮ ಗಾಂಧಿಯವರ ಕಲ್ಪನೆಯ ಕೂಸು: ಪ್ರೊ. ಆರ್.ರಾಜಣ್ಣ

ದೇಶ ಸೇವೆಯನ್ನು ಮಾಡಿ ಎಂಬ ಧ್ಯೇಯದೊಂದಿಗೆ ಕಾರ್ಯನಿರ್ವಹಿಸುತ್ತಿರುವ ರಾಷ್ಟ್ರೀಯ ಸೇವಾ ಯೋಜನೆ’(ಎನ್‍ಎಸ್ಎಸ್‍) ಮಹಾತ್ಮ ಗಾಂಧಿಯವರ ಕಲ್ಪನೆಯ ಕೂಸಾಗಿದೆ ಎಂದು ಮೈಸೂರು ವಿವಿ ಕುಲಸಚಿವ ಪ್ರೊ.ಆರ್. ರಾಜಣ್ಣ ಅಭಿಪ್ರಾಯಪಟ್ಟರು.

ಮಹಾರಾಜ ಕಾಲೇಜಿನಲ್ಲಿ ಮಂಗಳವಾರ ನಡೆದ ಪ್ರಾಂಶುಪಾಲರು ಮತ್ತು ಕಾರ್ಯಕ್ರಮಾಧಿಕಾರಿಗಳ  ಸಮಾವೇಶ ಮತ್ತು ವಿವಿ ಮಟ್ಟದ ಎನ್‍ಎಸ್‍ಎಸ್‍ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ವೆಬ್‍ಸೈಟ್, ಗ್ಯಾಜೆಟ್ ಮತ್ತು ಕ್ಯಾಲೆಂಡರ್ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು. ಸಮಾಜಕ್ಕೆ ಸೇವೆ ಸಲ್ಲಿಸುವುದರಲ್ಲಿ ಎನ್‍ಎಸ್‍ಎಸ್‍ ಸಕ್ರಿಯವಾಗಿದೆ. ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಸಮಾಜಕ್ಕಾಗಿ ದುಡಿಯುವುದು ಎನ್‍ಎಸ್‍ಎಸ್‍ ಮುಖ್ಯ ಧ್ಯೇಯ. ಜೀವನವನ್ನು ಹೇಗೆ ಸಾಗಿಸಬೇಕು ಮತ್ತು ಜವಾಬ್ದಾರಿಯುತ ಮನುಷ್ಯರಾಗುವುದು ಹೇಗೆ ಎಂಬುದನ್ನು ಎನ್‍ಎಸ್‍ಎಸ್‍ ಹೇಳೊಕೊಡುತ್ತದೆ ಎಂದರು.

ಮೈಸೂರು ವಿವಿ ಕುಲಪತಿ ಪ್ರೊ. ಕೆ.ಎಸ್. ರಂಗಪ್ಪ ಮಾತನಾಡಿ, ಎನ್‍ಎಸ್‍ಎಸ್‍ ಜವಾಬ್ದಾರಿಯುತ ಮತ್ತು ಸಂವೇದನಾಶೀಲ ನಾಗರಿಕರನ್ನು ಸೃಷ್ಟಿಸುವ ಫ್ಯಾಕ್ಟರಿ ಎಂದು ಹೇಳಬಹುದು. ನಾನು ಕೂಡ ರಾಷ್ಟ್ರೀಯ ಸೇವಾ ಯೋಜನೆಯ ವಿದ್ಯಾರ್ಥಿಯಾಗಿದ್ದೆ. ಮೈಸೂರು ವಿಶ್ವವಿದ್ಯಾನಿಲಯಕ್ಕೆ ಇಂದಿರಾ ಗಾಂಧಿ ರಾಷ್ಟ್ರೀಯ ಪ್ರಶಸ್ತಿ ಕೂಡ ಲಭಿಸಿದೆ. ಮೈಸೂರು ವಿವಿಯಲ್ಲಿ ಎನ್‍ಎಸ್‍ಎಸ್‍ ಭವನವನ್ನು ನಿರ್ಮಿಸುತ್ತಿದ್ದು, ಇದು ಇತರ ವಿವಿಗಳಿಗೂ ಮಾದರಿಯಾಗಲಿದೆ ಎಂದರು.

ಎನ್‍ಎಸ್‍ಎಸ್‍ ಮುಖ್ಯ ಸಂಯೋಜಕ ಪ್ರೊ. ಕಾಲಚನ್ನೇಗೌಡ ಮತ್ತು ಇತರರು ಉಪಸ್ಥಿರಿದ್ದರು.

Leave a Reply

comments

Related Articles

error: