ಪ್ರಮುಖ ಸುದ್ದಿಮೈಸೂರು

ಸ್ವರಾನುಭೂತಿ -2016, ರಘು ದೀಕ್ಷಿತ್ ಸಂಗೀತ ಕಾರ್ಯಕ್ರಮ ನ.12ರಂದು

ಸ್ವಾಮಿ ವಿವೇಕಾನಂದ ಯೂತ್ ಮೂಮೆಂಟ್ಸ್ ‘ಉಪಶಮನ ಆರೈಕೆ’ ಕಾರ್ಯಕ್ರಮದವತಿಯಿಂದ ಸ್ವರಾನುಭೂತಿ – 2016 ಅನ್ನು ಆಯೋಜಿಸಲಾಗಿದ್ದು ಖ್ಯಾತ ಗಾಯಕ, ಸಂಗೀತ ಸಂಯೋಜಕ ರಘು ದೀಕ್ಷಿತ್ ಸಂಗೀತ ಸಂಜೆ ಏರ್ಪಡಿಸಲಾಗಿದೆ ಎಂದು ಸಂಸ್ಥಾಪಕ ಅಧ್ಯಕ್ಷ ಡಾ.ಆರ್.ಬಾಲಸುಬ್ರಮಣಿಯಂ ತಿಳಿಸಿದರು.

raghuಅವರು, ಮಂಗಳವಾರ ಸುದ್ದಿಗೋಷ್ಠಿ ನಡೆಸಿ ನ.12ರ ಶನಿವಾರದಂದು ಕಲಾಮಂದಿರದಲ್ಲಿ ಸಂಜೆ 6ಕ್ಕೆ ಆರಂಭವಾಗಲಿದ್ದು 92.7 ಬಿಗ್ ಎಫ್.ಎಂ., ಡಿ.ಆರ್.ಸಿ.ಸಿನಿಮಾ ಮತ್ತು ಸಿ.ಚಾನಲ್ ಹಾಗೂ ಚಿರಾಗ್ ಹ್ಯಾಡ್ಸ್ ನಮ್ಮ ಮಾಧ್ಯಮ ಸಹಪ್ರಯೋಜಕತ್ವ ವಹಿಸಿವೆ. ಕಳೆದ 2011 ರಿಂದಲೂ ದೀರ್ಘಕಾಲಿಕ ಹಾಗೂ ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತಿದ್ದವರಿಗೆ ಮನೆ ಆಧಾರಿತ  ಚಿಕಿತ್ಸೆ ” ಉಪಶಮನ ಆರೈಕೆ” ಸೇವೆಯನ್ನು ಸ್ವಯಂ ಸೇವಾ ವೈದ್ಯರು, ದಾದಿಯರು, ಆಪ್ತ ಸಮಾಲೋಚಕರು ಹಾಗೂ ಸ್ವಯಂ ಸೇವಕರು ನೀಡುತ್ತಿದ್ದು ಇದರ ಸಹಾಯಾರ್ಥ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.

ಐದು ಸಾವಿರ ಟಿಕೇಟಿಗೆ ಮೂರು ಜನ, ಮೂರು ಸಾವಿರ ಟಿಕೇಟಿಗೆ ಇಬ್ಬರೂ, ಒಂದು ಸಾವಿರಕ್ಕೆ ಒಬ್ಬರು ಹಾಗೂ ಐದುನೂರು ರೂಪಾಯಿ ಮೌಲ್ಯದ ಟಿಕೇಟ್ ಅನ್ನು ವಿದ್ಯಾರ್ಥಿಗಳಿಗೆ ನಿಗದಿಪಡಿಸಲಾಗಿದ್ದು ಸ್ಥಳದಲ್ಲಿಯೇ ಟಿಕೇಟ್ ಸಿಗುವುದು ಎಂದು ಪ್ರಯೋಜಕತ್ವದ ಉಸ್ತುವಾರಿ ವಹಿಸಿರುವ ಚೈತ್ರ ತಿಳಿಸಿದರು. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ನಂ. 9886379529, 9686666155 ಹಾಗೂ 9900408284 ಅನ್ನು ಸಂಪರ್ಕಿಸಬಹುದು.

ಸುದ್ದಿಗೋಷ್ಠಿಯಲ್ಲಿ ಹೃದಯ ಶಸ್ತ್ರ ಚಿಕಿತ್ಸೆ ತಜ್ಞ ಡಾ.ರಾಜನ್ ಉಪಸ್ಥಿತರಿದ್ದರು.

Leave a Reply

comments

Related Articles

error: